ಬೆಂಗಳೂರು- ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಬಿ.ಜೆ.ಪಿ ಶಾಸಕ ಆರ್ ಅಶೋಕ್ ಹಜ್ ಭವನ ಮುಸ್ಲಿಂ ಬಾಂಧವರಿಗೆ ಕೊಟ್ಟಿರುವುದು ಬದಲಾಗಿ ಟಿಪ್ಪುವನ್ನು ಪ್ರೀತಿ ಮಾಡುವವರಿಗೆ ಕೊಟ್ಟಿರುವುದಲ್ಲ. ಟಿಪ್ಪು ಜಯಂತಿಯನ್ನೇ ಬಿಜೆ.ಪಿ ಈ ಹಿಂದೆ ವಿರೋಧಿಸಿತ್ತು, ಹಜ್ ಭವನಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 50 ಕೋಟಿ ಅನುದಾನ ನೀಡಿದ್ದು, ಬಿಜೆಪಿ ಮಾಡಿದ ಅಭಿವೃದ್ದಿ ಕೆಲಸವದು. ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕಳಂಕ ಬರುತ್ತದೆ. ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ಬಿ.ಜೆ.ಪಿ ವಿರೋಧಿಸುತ್ತದೆ. ಎಂದು ಶಾಸಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ