ಸಿದ್ದರಾಮಯ್ಯನವರ ಭಾಷಣ ಸುಬ್ಬರಾಯನಕಟ್ಟೆ ಭಾಷಣದಂತಿತ್ತು… ಹೆಚ್.ಡಿ.ಕುಮಾರಸ್ವಾಮಿ

661

ಚಿಕ್ಕಮಗಳೂರು : ನಲಪಾಡ್ ಅರೆಸ್ಟ್ ಆಗಿರೋದ್ರಲ್ಲಿ ಹಾಗೂ ಆತ ಜೈಲಲ್ಲಿ ಹೈಟೆಕ್ ಆಗಿರೋದ್ರಲ್ಲಿ ಆಶ್ಚರ್ಯ ಏನಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪೆಟ್ಟು ತಿಂದವರು ಬಲಾಢ್ಯರು. ಅವರಿಗೆ ಹಿರಿಯ ಪೊಲೀಸ್ ಹಾಗೂ ರಾಜಕಾರಣಿಗಳ ಜೊತೆ ಸಂಬಂಧವಿರೋದ್ರಿಂದ ನಲಪಾಡ್ ಬಂಧನವಾಗಿದೆ. ಆತನಿಗೆ ರಾಯಲ್ ಟ್ರೀಟ್‍ಮೆಂಟ್ ಸಿಗಲೇಬೇಕು. ಒದೆ ತಿಂದವರು ಸಾಮಾನ್ಯರಾಗಿದ್ರೆ ಆತ ಬಂಧನವೇ ಆಗ್ತಿರಲಿಲ್ಲ. ಯಾಕಂದ್ರೆ ಕಾಂಗ್ರೆಸ್ ಸರ್ಕಾರ ಇರೋದೆ ಅಂತವರ ರಕ್ಷಣೆಗೆ ಎಂದರು. ನಿನ್ನೆ ಸಿಎಂ ಸಿದ್ದರಾಮಯ್ಯನವರ ಭಾಷಣ ನೋಡಿದ್ದೇನೆ. ಅವರ ಮಾತು ಸುಬ್ಬರಾಯಕಟ್ಟೆಯಲ್ಲಿ ಮಾತನಾಡಿದಂತಿತ್ತು. ಆ ಭಾಷಣ ಕರ್ನಾಟಕದಲ್ಲಿ ಮಾಡಿದಂತೆ ಅನ್ನಿಸಲಿಲ್ಲ, ಎಲ್ಲೋ ವಿದೇಶದಲ್ಲಿ ನಿಂತು ಮಾತನಾಡಿದಂತಿತ್ತು ಎಂದರು. ಸಿದ್ದರಾಮಯ್ಯ ಸರ್ಕಾರ ಜಾಹೀರಾತು ಸರ್ಕಾರ, ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡಿದ್ರೆ ಯಾರೂ ಮರುಳಾಗೋದಿಲ್ಲ. ಅವರ ಮಂತ್ರದಂಡ ರಾಜ್ಯದಲ್ಲಿ ಕೆಲಸ ಮಾಡಲ್ಲ, ಯಾರೋ ಬರೆದುಕೊಡುವ ಭಾಷಣವನ್ನ ಮಾಡಿ ಹೋಗ್ತಾರೆ ಎಂದರು. ಜನರ ಸಮಸ್ಯೆ ಕೇಳೋದಕ್ಕೆ ಇಲ್ಲಿ ಯಾರೂ ಇಲ್ಲ. ಮೋದಿ-ರಾಹುಲ್ ಪರಸ್ಪರ ಬೈದಾಡಿಕೊಳ್ಳೋದಕ್ಕೆ ರಾಜ್ಯ ವೇದಿಕೆಯಾಗಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.