ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರೀ ಮಳೆ…

406
firstsuddi

ಚಿಕ್ಕಮಗಳೂರು- ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್ ಪುರ ಹಾಗೂ ಚಿಕ್ಕಮಗಳೂರಿನಲ್ಲಿ ಗಾಳಿ ಸಹಿತ ವರುಣನ ಅಬ್ಬರ ಮುಂದುವರೆದಿದೆ. ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಯ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವ ಮುನ್ನವೇ ಮಲೆನಾಡಿನಲ್ಲಿ ಮತ್ತೆ ವರುಣನ ಅಬ್ಬರ ಮುಂದುವರೆದಿದೆ. ಜೊತೆಗೆ ಕಳಸ-ಹೊರನಾಡು ಸಂಪರ್ಕ ಕಡಿತವಾಗಿದ್ದು, ಹೆಬ್ಬಾಳೆ ಸೇತುವೆ ಭದ್ರಾನದಿಯಲ್ಲಿ ಮುಳುಗಿ ಹೋಗಿದೆ. ಜಿಲ್ಲೆಯ ಕೆಲ ಭಾಗದಲ್ಲಿ ನಿನ್ನೆಯಿಂದಲೂ ಮಳೆ ಸುರಿಯುತ್ತಿದ್ದು ಇತ್ತ ಮಲೆನಾಡಲ್ಲಿ ಜನಸಾಮಾನ್ಯರು ಮನೆಯಿಂದ ಹೊರಬಾರದಂತೆ ಮಳೆಯಾಗುತ್ತಿದ್ದು, ಕಳಸ, ಚಾರ್ಮಾಡಿ, ಬಾಳೆಹೊನ್ನೂರು ಭಾಗದಲ್ಲಿ ದಟ್ಟ ಮಂಜು ಸೇರಿದಂತೆ ಧಾರಾಕಾರ ಮಳೆಯಾಗುತ್ತಿದೆ.. ತುಂಗಾ, ಭದ್ರ ಹಾಗೂ ಹೇಮಾವತಿ ಮೈದುಂಬಿ ಹರಿಯುತ್ತಿದ್ದು. ಇನ್ನೂ ಶೃಂಗೇರಿ ಸುತ್ತಮುತ್ತಲೂ ಭಾರೀ ಮಳೆಯಾಗ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಾರದಾಂಬೆ ದೇಗುಲದ ಕಪ್ಪೆಶಂಕರನಾರಾಯಣ, ಶ್ರೀಗಳ ಸಂದ್ಯಾವಂದನೆ ಮಂಟಪ ಮುಳುಗುವ ಹಂತ ತಲುಪಿದೆ. ಮಲೆನಾಡಿನ ಸರಾಸರಿ ಮಳೆಗಿಂತ ಈ ಬಾರಿ ಶೇಕಡ 99ರಷ್ಟು ಮಳೆ ಹೆಚ್ಚಾಗಿರುವುದರಿಂದ ಮಲೆನಾಡು ಮಳೆಯಿಂದ ಮುಚ್ಚಿಕೊಂಡಂತಾಗಿದೆ.