ಕಳಸ ಹೋಬಳಿಯಾದ್ಯಂತ ಮೂರು ದಿನಗಳಿಂದ ಧಾರಾಕಾರ ಮಳೆ.

435
firstsuddi

ಮೂಡಿಗೆರೆ- ಕಳಸ ಹೋಬಳಿಯಾದ್ಯಂತ ಬಾನುವಾರ ಇಡೀ ದಿನ ಜಡಿಮಳೆ ಸುರಿದು ಜನಜೀವನವನ್ನು ತತ್ತರವಾಗಿಸಿತು.ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಮಳೆ ಭಾನುವಾರ ಸಂಜೆಯವರೆಗೂ ಧಾರಾಕಾರವಾಗಿ ಸುರಿಯಿತು.
ಮಳೆಯ ಜೊತೆ ಶೀತ ಗಾಳಿಯು ಬೀಸುತ್ತಿತ್ತು.ಮಳೆಯಿಂದ ಜನರು ಮನೆಯಿಂದ ಹೊರಬರದೆ ಪಟ್ಟಣ ಬಿಕೋ ಅನ್ನುತ್ತಿತ್ತು.ಸಂತೆ ದಿನವಾಗಿರುವುದರಿಂದ ಜನ ಪಟ್ಟಣಕ್ಕೆ ಬರಲಾಗದೆ ತೊಂದರೆ ಅನುಭವಿಸಿದರು.ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೋಬಳಿಯ ಭದ್ರಾ ನದಿ,ಸೋಮವತಿ ನದಿಗಳು ತುಂಬಿ ಹರಿಯಲಾರಂಬಿಸಿದವು.ಇದೇ ರೀತಿ ಬಿರುಸಿನ ಮಳೆ ಸುರಿದರೆ ಹೊರನಾಡು ಸಂಪರ್ಕ ಸೇತುವೆ ಮಳುಗಿ ಹೊರನಾಡು-ಕಳಸ ಸಂಪರ್ಕ ಕಡಿತವಾಗುವುದಲ್ಲದೆ,ಕಳಸ-ಕುದುರೆಮುಖ,ಕಳಸ_ಬಾಳೆಹೊನ್ನೂರು ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಲಿದೆ.ನದಿಯಲ್ಲಿ ತುಂಬಿದ ಪ್ರವಾಹದಿಂದ ಬಹಳಷ್ಟು ತಗ್ಗು ಪ್ರದೇಶಗಳು ಜಲಾವೃತ ಗೊಂಡವು.ಅಲ್ಲದೆ ಸಣ್ಣ ಪುಟ್ಟ ದರೆ ಕುಸಿತ,ಮರಗಳು ದರೆಗುಳಿದವುಗಳನ್ನು ಹೊರತು ಪಡಿಸಿದರೆ ಬೇರೆ ಯಾವುದೂ ಆಸ್ತಿ ಪಾಸ್ತಿ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಲಿಲ್ಲ.