ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಸೇತುವೆಯಾದ ಹೆಬ್ಬಾಳೆ ಸೇತುವೆ ಮುಳುಗಡೆ.

1058
firstsuddi

ಮೂಡಿಗೆರೆ- ಕಳಸ, ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಸೇತುವೆಯಾದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ 15 ದಿನಗಳಲ್ಲಿ ಇದು ಎರಡನೇ ಬಾರಿ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ವಾಹನ ಸವಾರರು, ಪ್ರವಾಸಿಗರು, ಸೇತುವೆಯ ಎರಡೂ ಬದಿಯಲ್ಲಿ ನೀರು ಕಡಿಮೆಯಾಗಲು ಕಾದುನಿಂತಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಗೆ ಸೇತುವೆಯ ತಡೆಗೋಡೆಗಳು ಮುರಿದು ಬಿದ್ದಿದ್ದು, ರಸ್ತೆ ಮಧ್ಯೆಯಲ್ಲೇ ಸೇತುವೆ ಗುಂಡಿ ಬಿದ್ದು, ಎಡ್ಜ್ ಕೂಡ ಮುರಿದಿತ್ತು. ಈಗ ಧಾರಾಕಾರವಾಗಿ ಸುರಿಯುತ್ತಿರೋ ಮಳೆಗೆ ಮತ್ತೆ ಸೇತುವೆ ಮುಳುಗಡೆಯಾಗಿದೆ. 1992ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ಸೇತುವೆ ತೀರಾ ಕೆಳಮಟ್ಟದಲ್ಲಿರೋದ್ರಿಂದ ಈ ಬಾರಿ ಮಳೆಗೆ ಭದ್ರಾ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಅಂತಾ ಸ್ಥಳಿಯರು ಸರ್ಕಾರಕ್ಕೆ ಒತ್ತಾಯಿಸಿದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.