ಕಳಸ ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ…

861
photo-sudish suvarna

ಕಳಸ:ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು,ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನಜೀವ ಅಸ್ತವ್ಯಸ್ತವಾಗಿದೆ. ಕಳೆದ ಒಂದು ವಾರಗಳಿಂದ ಮಳೆಯ ಪ್ರಮಾಣ ಕಡಿಮೆಗೊಂಡಿತ್ತು.ಆದರೆ ಶುಕ್ರವಾರದ ರಾತ್ರಿಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ನೆರೆ ಬರುವ ಮಸ್ಸೂಚನೆ ಕಾಣುತ್ತಿದೆ.ಶನಿವಾರ ಬೆಳಿಗ್ಗೆ ಕಳಸ-ಹೊರನಾಡು ಮದ್ಯೆ ಭದ್ರಾ ನದಿಗೆ ಕಟ್ಟಿರು ಹೆಬ್ಬಾಳೆ ಸೇತುವೆ ಕೆಲ ಕಾಲ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಯಿತು.ಮದ್ಯಾಹ್ನದ ಮೇಲೆ ಮತ್ತಷ್ಟು ಮಳೆಯ ಪ್ರಮಾಣ ಹೆಚ್ಚಾಗಿ ಸುರಿಯುತ್ತಿರುವುದರಿಂದ ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದೆ.ಕಳೆದ ಇಪ್ಪತ್ತು ದಿನಗಳ ಅವದಿಯಲ್ಲಿ ನಾಲ್ಕು ಬಾರಿ ಈ ಸೇತುವೆ ಮುಳುಗಡೆಯಾಗಿದ್ದು,ಸೇತುವೆ ಕುಸಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಳಸ ಹೊರನಾಡಿಗೆ ಬಂದಿರು ನೂರಾರು ಪ್ರವಾಸಿಗರು ಇಲ್ಲಿಯ ಮಳೆಯ ಅಬ್ಬರದಿಂದ ಕಂಗೆಟ್ಟು ಹೋಗಿದ್ದಾರೆ.ಪ್ರತೀ ದಿನ ನಿರಂತರ ಸುರಿಯುತ್ತಿರುವ ಮಳೆಯಿಂದ ಅಡಕೆ,ಕಾಫಿ ಬೆಳೆಗೆ ರೋಗ ತಗಲುವ ಸಾದ್ಯತೆ ಇದ್ದು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.ಈ ಬಾರಿಯ ಅಧಿಕ ಮಳೆಯ ಪ್ರಮಾಣದಿಂದ ಹೋಬಳಿಯ ಬಹುತೇಕ ಕಡೆಗಳಲ್ಲಿ ರಸ್ತೆಗಳು ಶಿಥಿಲಾವಸ್ಥೆಗೆ ತಲುಪಿದ್ದು,ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.ಹಲವೆಡೆ ಹಳ್ಳಿಗಳಿಗೆ ಸಂಪರ್ಕ ಸೇತುವೆಗಳಲಿಲ್ಲದೆ ಗ್ರಾಮಸ್ಥರು ಬಿದಿರಿನ ದಬ್ಬೆಗಳನ್ನು ಕಟ್ಟಿ ತಾವೇ ಸೇತುವೆ ನಿರ್ಮಾಣ ಮಾಡಿಕೊಂಡಿದ್ದಾರೆ.
ನದಿಯ ಆಸು ಪಾಸಿನ ಅಡಕೆ ತೋಟಗಳು,ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ.ಬಹುತೇಕ ನದಿಯ ಅಂಚಿನ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿವೆ.