ಬಾಳೆಹೊನ್ನೂರಿನಲ್ಲಿ ನಾಲ್ಕು ವರ್ಷಗಳ ಬಳಿಕ ತುಂಬಿದ ತಾವರೆಕೆರೆ ಬಿರುಕು.

401

ಚಿಕ್ಕಮಗಳೂರು : ಮಲೆನಾಡಿನಲ್ಲಿ ನಿನ್ನೆ ಸಂಜೆ ನಾಲ್ಕು ಗಂಟೆಗೆ ಆರಂಭವಾದ ವರುಣನ ಅಬ್ಬರ ಇನ್ನೂ ನಿಂತಿಲ್ಲ. ನಿನ್ನೆ ಇಡೀ ದಿನ ಬಿಡುವು ನೀಡಿದ್ದ ಮಳೆರಾಯ ಮಲೆನಾಡಿನ ಶೃಂಗೇರಿ, ಕೊಪ್ಪ, ಕಳಸ, ಕುದುರೆಮುಖ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಇಡೀ ರಾತ್ರಿ ಸುರಿದಿದ್ದಾನೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎನ್.ಆರ್.ಪುರ ತಾಲೂಕಿನ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ತಾಲೂಕಿನಲ್ಲಿ ಭದ್ರಾ ನದಿ ಹರಿಯೋ ಬಾಳೆಹೊನ್ನೂರು ಭಾಗದಲ್ಲಿನ ನದಿಪಾತ್ರದ ಶಾಲೆ-ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ. ಇನ್ನು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಾಲ್ಕು ವರ್ಷಗಳ ಬಳಿಕ ತುಂಬಿದ ತಾವರೆಕೆರೆ ಬಿರುಕು ಬಿಟ್ಟಿದ್ದು ಕೆರೆ ನೀರೆಲ್ಲಾ ತೋಟದತ್ತ ನುಗ್ಗಿದ್ದು. ಇದರಿಂದ ಸುತ್ತಮುತ್ತಲಿನ ತೋಟದವರು ಆತಂಕಕ್ಕೀಡಾಗಿದ್ದಾರೆ. ದಿನೇ-ದಿನೇ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕಾಫಿ, ಅಡಿಕೆ, ಮೆಣಸಿಗೆ ಕೊಳೆ ರೋಗ ಕೂಡ ಹೆಚ್ಚಾಗ್ತಿದ್ದು ಜನ ಕಂಗಾಲಾಗಿದ್ದಾರೆ.