ಕೊಟ್ಟಿಗೆಹಾರ ಖಾಸಗಿ ಬಸ್ ನಿಲ್ದಾಣದಲ್ಲಿ ಕುದುರೆಗಳದ್ದೇ ಕಾರುಬಾರು,,,

462

ಮೂಡಿಗೆರೆ -ಹಾಸನದ ರೈತರ ಬೆಳೆಗಳಿಗೆ ಹಾನಿ ಮಾಡಿ ಕಾಟ ನೀಡುತ್ತಿದ್ದ ಅನೇಕ ಕುದುರೆಗಳನ್ನು ಹಾಸನದ ಜನರು ಬಣಕಲ್ ಸಮೀಪಕ್ಕೆ ತಂದು ಬಿಟ್ಟಿದ್ದರು.ಕುದುರೆ ನೋಡಿ ಮಲೆನಾಡಿನ ಜನ ಮುಗಿಬಿದ್ದು ಕುದುರೆಗಳನ್ನು ಪುಕ್ಕಟೆಯಾಗಿ ಕೊಂಡು ಸಾಕುತ್ತಿದ್ದರು.ಕೆಲವರು ಕುದುರೆಗಳನ್ನು ಹೋಂಸ್ಟೇಗಳಿಗೆ ಮಾರಿ ಲಾಭಿ ನಡೆಸಿದ್ದರು. ಕೆಲವರು ಕುದುರೆಗಳನ್ನು ತಂದು ಬಹು ಬೇಡಿಕೆ ಬರಬಹುದೆಂಬ ನಿರೀಕ್ಷೆಯಿಂದ ಸಾಕುತ್ತಿದ್ದರು.ಆದರೆ ಈಗ ಉಳಿದ ಕುದುರೆಗಳಿಗೆ ಡಿಮಾಂಡ್ ಇಲ್ಲದೇ ಅವುಗಳನ್ನು ಕಟ್ಟಿ ಹಾಕದೇ ಬೀದಿಗೆ ಬಿಟ್ಟು ಅವುಗಳು ಪೇಟೆಗಳಲ್ಲಿ ಬಿಡಾಡಿ ಕುದುರೆಗಳಾಗಿ ಸಂಚರಿಸುತ್ತಿವೆ.ಈಗ ಕೊಟ್ಟಿಗೆಹಾರ ಖಾಸಗಿ ನಿಲ್ದಾಣಗಳಲ್ಲಿ 3 ಕುದುರೆಗಳ ದರ್ಬಾರು ನಡೆಯುತ್ತಿದ್ದು ಖಾಸಗಿ ಬಸ್ ನಿಲ್ದಾಣ ಹೊರನಾಡು ಸಾಗುವ ಪ್ರಯಾಣಿಕರಿಗೆ ಆಶ್ರಯವಾಗದೇ ಕುದುರೆಗಳ ಕೊಟ್ಟಿಗೆಯಂತಾಗಿದೆ.ಗಲೀಜು ತುಂಬಿ ಸ್ವಚ್ಚತೆ ಕಳೆಗುಂದಿ ನಾರುತ್ತಿದೆ.ಹೊರನಾಡಿಗೆ ತೆರಳುವ ಪ್ರಯಾಣಿಕರು ಕುದುರೆಗಳ ಕಾಟದಿಂದ ಬಸ್‍ಗಳಿಗೆ ಏರಲು ರಸ್ತೆ ಬದಿಯಲ್ಲಿ ಮೂಗು ಮುಚ್ಚಿ ನಿಲ್ಲುವ ಪ್ರಸಂಗ ಎದುರಾಗಿದೆ.ಬಹು ಬೇಡಿಕೆಯಿದ್ದ ಕುದುರೆಗಳು ಈಗ ಬೇಡಿಕೆ ಕುಂದಿ ಕೊಟ್ಟಿಗೆಹಾರದ ಮುಖ್ಯ ರಸ್ತೆ ಮತ್ತು ಬಸ್ ನಿಲ್ದಾಣಗಳಲ್ಲಿ ಸಂಚರಿಸಿ ಪ್ಲಾಸ್ಟಿಕ್ ಮುಂತಾದ ವಸ್ತುಗಳು ಅದರ ಆಹಾರವಾಗುತ್ತಿವೆ.ಸದ್ಯಕ್ಕೆ 3 ಕುದುರೆಗಳ ಮಾಲಿಕರು ಕುದುರೆಗಳನ್ನು ಪೇಟೆ ಬದಿಗೆ ಬಿಡದೇ ಅವುಗಳನ್ನು ಕಟ್ಟಿ ಹಾಕಿ ಸಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಸಂಬಂಧ ಪಟ್ಟ ಅಧಿಕಾರಿಗಳು ಕುದುರೆಗಳನ್ನು ಬೀದಿಗೆ ಬಿಡದಂತೆ ಮಾಲಿಕರಿಗೆ ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.