ನವದೆಹಲಿ: ಅತ್ಯುತ್ತಮ ಭಾರತ ನಿರ್ಮಾಣಕ್ಕಾಗಿ ತಾವು ಯಾವುದೇ ರೀತಿಯ ರಾಜಕೀಯ ಬೆಲೆ ತೆತ್ತಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಆಯೋಜನೆಯಾಗಿದ್ದ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅತ್ಯುತ್ತಮ ಭಾರತ ನಿರ್ಮಾಣಕ್ಕಾಗಿ ತಾವು ಯಾವುದೇ ರೀತಿಯ ರಾಜಕೀಯ ಬೆಲೆ ತೆತ್ತಲು ಸಿದ್ಧ. ತಮ್ಮ ಈ ಪ್ರಯತ್ನವನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ರಹಿತ ಮತ್ತು ನಾಗರಿಕ ಕೇಂದ್ರಿತ, ಅಭಿವೃದ್ಧಿ-ಕೇಂದ್ರಿತ ಪರಿಸರವನ್ನು ಅಭಿವೃದ್ಧಿಪಡಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎ ನೋಟು ನಿಷೇಧಕ್ಕೂ ಮುನ್ನ ಪ್ರತ್ಯೇಕ ಸಮಾನಾಂತರ ಆರ್ಥಿಕತೆಯಾಗಿದ್ದ ಕಪ್ಪುಹಣ ನೋಟು ನಿಷೇಧದ ಬಳಿಕ ಔಪಚಾರಿಕ ವ್ಯವಸ್ಥೆಯಲ್ಲಿ ಸೇರಿ ಹೋಗಿದೆ. ನೋಟು ನಿಷೇಧ ಬಳಿಕ ವಿತ್ತ ಸಚಿವಾಲಯದ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದತ್ತಾಂಶ ಸಂಗ್ರಹಣೆ ಮೂಲಕ ಕಪ್ಪುಹಣವನ್ನು ಬಯಲಿಗೆಳೆದಿದ್ದೇವೆ. ಈ ಪೈಕಿ ಆಧಾರ್ ಪಾತ್ರ ಗಣನೀಯವಾಗಿದ್ದು, ಬೇನಾಮಿ ಆಸ್ತಿ ಪತ್ತೆ ಹಚ್ಚುವಿಕೆಗೆ ದೊಡ್ಡ ಸಾಧನವಾಗಿದೆ ಎಂದು ಮೋದಿ ಬಣ್ಣಿಸಿದರು.