ಬೆಂಗಳೂರು- ಜೆಡಿಎಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಮುಖ್ಯಮಂತ್ರಿಯಾಗಿದ್ದೇನೆ, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತೋಷವಿದೆ, ಆದರೆ ನಾನು ಸಂತೋಷವಾಗಿಲ್ಲ , ನಾನು ಮೆರೆಯಬೇಕೆಂದು ಸಿಎಂ ಆಗಿಲ್ಲ, ನಾನು ಹೋದಕಡೆ ಜನ ಸೇರ್ತಾರೆ, ಸಂತೋಷ ಪಡ್ತಾರೆ. ಆದರೆ ಜನರು ನನ್ನ ಪಕ್ಷಕ್ಕೆ ಬಹುಮತ ನೀಡುವುದಿಲ್ಲ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ರಾಜ್ಯದ ಜನತೆ ನನಗೆ ಬಹುಮತ ಕೊಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ, ನಾನು ಹೋದಕಡೆ ಜನ ಸೇರುತ್ತಾರೆ, ಸಂತೋಷ ಪಡ್ತಾರೆ, ಆದರೆ ದೌರ್ಭಾಗ್ಯವೆಂದರೆ ಅವರು ನಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ. ಈ ಬಗ್ಗೆ ನನಗೆ ನೋವಿದೆ ಎಂದು ಸನ್ಮಾನ ಸಭೆಯಲ್ಲಿ ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.