ಚಿಕ್ಕೋಡಿ- ಪತ್ನಿಯಿಂದ ಬೆಸತ್ತ ಪತಿ ಶಶಿಧರ್ ಕೋಪರ್ಡೆ ಎಂಬಾತ ಹಲವು ದಿನಗಳಿಂದ ಪತ್ನಿ ಶಾಂತ ನನ್ನ ಮೇಲೆ ಸುಳ್ಳು ವರದಕ್ಷಿಣೆ ಕೇಸ್ ನೀಡಿ ಇಲ್ಲ ಸಲ್ಲದ ಆರೋಪ ಮಾಡಿ ಕಿರಿಕಿರಿ ಮಾಡುತ್ತಿದ್ದಾಳೆ ನನ್ನ ಮನೆಯಿಂದ ನನ್ನನ್ನು ಹೊರ ಹಾಕಿದ್ದಾಳೆ..ಹಾಗೂ ನನ್ನ ನೆಮ್ಮದಿ ಹಾಳೂ ಮಾಡುತ್ತಿದ್ದಾಳೆ. ಗಂಡಸರಿಗೆ ಸರಿಯಾದ ರೀತಿ ಕಾನೂನಿಲ್ಲ ಎಂದು ಬೆಸತ್ತು ಅಶ್ವತ್ಥ ಮರಕ್ಕೆ ನೂಲು ಸುತ್ತಿ ವಟ ಸಾವಿತ್ರಿ ವ್ರತ ಮಾಡಿ ಮುಂದಿನ ಏಳು ಜನ್ಮದಲ್ಲೂ ಇಂಥ ಹೆಂಡತಿ ಬೇಡವೇ ಬೇಡ ಎಂದು ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.