ಕೀಕಿ’ ಡ್ಯಾನ್ಸ್ ಗೊತ್ತಿಲ್ಲದೆ ತಪ್ಪು ಮಾಡಿದ್ದೇನೆ ಈ ಬಗ್ಗೆ ನನಗೆ ಗೊತ್ತಿದ್ದರೆ ನಾನು ಖಂಡಿತವಾಗಿಯೂ ಮಾಡುತ್ತಿರಲಿಲ್ಲ.- ನಿವೇದಿತಗೌಡ.

345
firstsuddi

ಮೈಸೂರು- ಬಾಸ್ ಖ್ಯಾತಿಯ ನಿವೇದಿತಗೌಡ ಅಪಾಯಕಾರಿ ‘ಕೀಕಿ’ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು,ಈ ಬಗ್ಗೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರು ನಿವೇದಿತಗೌಡ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು .ಈ ಬಗ್ಗೆ ಪ್ರತಿಕ್ರಯಿಸಿದ ನಿವೇದಿತಗೌಡ ಅವರು ತಾವು ಗೊತ್ತಿಲ್ಲದೆ ತಪ್ಪು ಮಾಡಿದ್ದೇನೆ ಈ ಬಗ್ಗೆ ನನಗೆ ಗೊತ್ತಿದ್ದರೆ ನಾನು ಖಂಡಿತವಾಗಿಯೂ ಮಾಡುತ್ತಿರಲಿಲ್ಲ. ಆದರೆ ಈ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ದೂರು ನೀಡಿದವರು ನನ್ನನ್ನು ಸಂಪರ್ಕಿಸಿದ್ದರೆ ನಾನು ತಕ್ಷಣವೇ ವಿಡಿಯೋ ಡಿಲೀಟ್ ಮಾಡುತ್ತಿದ್ದೆ. ಇದು ಒಳ್ಳೆಯದಲ್ಲ ಎಂದು ಗೊತ್ತಾಗಿದೆ. ಇದು ಗೊತ್ತಾದ ಬಳಿಕ ತಕ್ಷಣ ನಾನು ವಿಡಿಯೋ ಡಿಲೀಟ್ ಮಾಡಿದ್ದೇನೆ ಎಂದಿದ್ದಾರೆ.