ಬೆಂಗಳೂರು – ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುವ ಬಗ್ಗೆ ಶೀಘ್ರವೇ ಸಚಿವ ಸಂಪುಟ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಹಾಗೂ ರೈತರ ಸಾಲ ಮನ್ನಾ ಮಾಡಲು ಬದ್ದನಾಗಿದ್ದು, ಈ ಬಗ್ಗೆ ಬ್ಯಾಂಕ್ ನ ಮುಖ್ಯಸ್ಥರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮ ವಾಸ್ತವ್ಯಕ್ಕೆ ತೀರ್ಮಾನ ಮಾಡಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಹೇಗೆ ನಡೆಯುತ್ತದೆ. ಅನ್ನೋದನ್ನು ತೋರಿಸಿಕೊಡುತ್ತೇನೆ. ಹಾಗೂ ಮೂರು ತಿಂಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ನಿಮಗೆ ಗೊತ್ತಾಗಲಿದೆ. ಸಾಧ್ಯವಾದ ಮಟ್ಟಿಗೆ ನಾನು ಆಡಳಿತ ಬಿಗಿಗೊಳಿಸುತ್ತೇನೆ . ಹಾಗೂ ಏಳೆಂಟು ವಾಹನಗಳು ಬೇಡ ಎಂದಿದ್ದೆ, ಆದರೆ ಅಧಿಕಾರಿಗಳು ಭದ್ರತೆ ಕಡಿಮೆಗೊಳಿಸಲು ಒಪ್ಪುತ್ತಿಲ್ಲ.ದೆಹಲಿಗೂ ನಾನು ಸಾಮಾನ್ಯ ವಿಮಾನದಲ್ಲೆ ಪ್ರಯಾಣಿಸುತ್ತಿದ್ದೇನೆ. ದುಂದುವೆಚ್ಚ ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿದ್ದೇನೆ. ಎಂದು ಮಾಧ್ಯಮ ಸಂವಾದದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.