ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಉನಾ ರ್ಯಾ ಲಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹಿಮಾಚಲ ಪ್ರದೇಶಲ್ಲಿ ಮೊದಲ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಮೋದಿ, ಕಾಂಗ್ರೆಸ್ ಯುದ್ಧಭೂಮಿಯಿಂದ ಪಲಾಯನ ಮಾಡಿದೆ. ಹಿಮಾಚಲ ಪ್ರದೇಶದ ಎಲೆಕ್ಷನ್ ಒನ್ ಸೈಡ್ ಸ್ಪರ್ಧೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಮೋದಿ, ನವೆಂಬರ್ 8 ಕಾಂಗ್ರೆಸ್ ಗೆ ಕರಾಳ ದಿನವಾದ್ರೆ, ದೇಶದ ಜನಕ್ಕೆ ಕಪ್ಪು ಹಣ ವಿರೋಧಿ ದಿನ ಎಂದರು. ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಭ್ರಷ್ಟಾಚಾರವನ್ನ ಗುರುತಿಸಿದ್ರೋ ವಿನಃ ಅದರ ನಿರ್ಮೂಲನೆಗೆ ಏನನ್ನೂ ಮಾಡಲಿಲ್ಲ ಎಂದರು. ನಾವು ಬೇನಾಮಿ ಆಸ್ತಿ ಸಂಬಂಧ ಹೊಸ ಕಾಯ್ದೆಯನ್ನ ಜಾರಿಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್ ಅದನ್ನೂ ಬೆಂಬಲಿಸಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಇದೆ ಎಂದು ವ್ಯಂಗ್ಯವಾಡಿದರು.
ಜಿಎಸ್ಟಿಯನ್ನ ದೇಶದ ಜನ ಒಪ್ಪಿದ್ದಾರೆ. ಪ್ರಸ್ತುತ ಅದರಲ್ಲಿನ ಸಮಸ್ಯೆಗಳಿಗೆ ರಾಜ್ಯಗಳೇ ಕಾರಣ. ಭಾರತದ ಭವಿಷ್ಯ ಹಾಗೂ ಅಭಿವೃದ್ಧಿಯನ್ನ ಆಧರಿಸಿದ್ದು, ಎಲ್ಲಾ ಸಮಸ್ಯೆಗಳಿಗೆ ಅಭಿವೃದ್ಧಿಯೊಂದೇ ಮಂತ್ರದಂಡ ಎಂದರು. ನಮ್ಮ ಸರ್ಕಾರ ಜನ ಸೇವೆಗೆ ಮುಂದಾಗಿದ್ದು, ಹಿಮಾಚಲ ಪ್ರದೇಶದ ಪ್ರವಾಸೋದ್ಯಮವನ್ನ ಬೆಳೆಸಲು ನಾವು ಶ್ರಮಿಸುತ್ತಿದ್ದೇವೆ. ಆದ್ದರಿಂದ ಅನುದಾನಗಳನ್ನ ಸಮರ್ಪಕವಾಗಿ ಜನರ ಕಲ್ಯಾಣಕ್ಕೆ ವಿನಿಯೋಗಿಸೋ ಭರವಸೆ ನೀಡಿದ್ದಾರೆ. ನವೆಂಬರ್ 9ರಂದು ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.