ದಾನಿಗಳೇ ಇಲ್ಲದಿದ್ದರೆ ಯಾವುದೇ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ -ಟಿ.ಆರ್.ಮಾಲತಿ

392
firstsuddi

ಬಣಕಲ್-ಮನುಷ್ಯ ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು.ಉದಾರ ಗುಣಗಳಿಂದ ಇತರರಿಗೆ ದಾರಿದೀಪವಾಗಬೇಕು ಎಂದು ಬಣಕಲ್ ಶ್ರೀವಿದ್ಯಾಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ ಅಭಿಪ್ರಾಯ ಪಟ್ಟರು.ಅವರು ಶುಕ್ರವಾರದಂದು ವಿದ್ಯಾಭಾರತಿ ಶಾಲೆಯ ದಾನಿಗಳಾದ ದಿವಂಗತ ಶಾಮಣ್ಣ ಶೆಟ್ಟಿ ಅವರ ಹನ್ನೊಂದನೆ ವರ್ಷದ ಪುಣ್ಯ ಸ್ಮರಣೆಯನ್ನು ಶಾಲೆಯಲ್ಲಿ ಆಚರಿಸಿ ಮಾತನಾಡಿ ದಾನ ನೀಡುವುದು ಮನುಷ್ಯನ ಉತ್ತಮ ಸ್ವಭಾವಗಳಲ್ಲಿ ಒಂದಾಗಿದ್ದು ದಾನಿಗಳೇ ಇಲ್ಲದೇ ಇದ್ದಿದ್ದರೆ ಯಾವುದೇ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.ದಾನಿಗಳ ಫಲದಿಂದ ಇಂದು ನಮ್ಮ ವಿದ್ಯಾಭಾರತಿ ಸಂಸ್ಥೆ ಅನೇಕ ಮಕ್ಕಳಿಗೆ ವಿದ್ಯಾರ್ಜನೆ ನೀಡಿ ಮಕ್ಕಳ ಭವಿಷ್ಯ ಬೆಳಗಿಸಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಲಾ ಸಮಿತಿಯ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ಮಾತನಾಡಿ ದಾನ ಕೊಟ್ಟ ಕೊಡುಗೈ ದಾನಿಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡಲು ಶಾಮಣ್ಣ ಶೆಟ್ಟಿಯವರು ಮುಂದೆ ಬಂದರು.ಇವರ ಈ ಪ್ರೋತ್ಸಾಹ ಅವರ ಮರಣದ ನಂತರ ಅವರ ಪತ್ನಿ ಸುನಂದಾ ಶೆಟ್ಟಿ ಮುಂದುವರೆಸಿಕೊಂಡು ಬಂದು ಅನೇಕ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.ವಿದ್ಯಾ ದಾನದಿಂದ ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲೂ ದಾನಿಗಳನ್ನು ಮರೆಯಬಾರದು.ಅವರ ಉದಾರತೆ ಮಕ್ಕಳ ಏಳಿಗೆಗೆ ಪೂರಕವಾಗಿದ್ದು ದಿವಂಗತ ಶಾಮಣ್ಣ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನೂರು ನಮನ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಕೊಡುಗೈ ದಾನಿ ದಿವಂಗತ ಶಾಮಣ್ಣ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನಮನ ಸಲ್ಲಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಾಗರಾಜು,ಶಿಕ್ಷಕರಾದ ವಸಂತ್‍ಹಾರ್‍ಗೋಡು,ಭಕ್ತೇಶ್,ಶೇಖರಪ್ಪ,ಲಿಂಗರಾಜ್,ಲೋಕೇಶ್,ಪ್ರತಾಪ್,ಮನಮೋಹನ್,ಶಿಕ್ಷಕಿ ಕುಸುಮಶೆಟ್ಟಿ,ಆತ್ಮಿಕ,ಲೀಲಾಮಣಿ,ಇಂದಿರಾ,ಶ್ವೇತಾ,ಕಮಲಮ್ಮ ಮತ್ತಿತರರು ಇದ್ದರು.