ಮತ್ತೇ ನಾನು ಮುಖ್ಯಮಂತ್ರಿ ಆಗುತ್ತೇನೆ. – ಸಿದ್ದರಾಮಯ್ಯ…

614
firstsuddi

ಹಾಸನ: ಹೊಳೇನರಸೀಪುರದಲ್ಲಿ  ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಕೆರೆ ನೀರಲ್ಲ, ಕಾಲಚಕ್ರ ಉರುಳುತ್ತದೆ. ಮೇಲಿನವರು ಕೆಳಗೆ, ಕೆಳಗಿನವರು ಮತ್ತೆ ಮೇಲೆ ಬರಲೇ ಬೇಕು. ಇಂದಿನ ರಾಜಕಾರಣ ಜಾತಿ ಹಣದ ಮೇಲೆ ನಡೆಯುತ್ತಿದೆ. ನನ್ನ ಆಡಳಿತದ ಅವಧಿಯಲ್ಲಿ ಎಲ್ಲಾ ಜಾತಿಯ ಬಡ ಜನರಿಗೆ ಸಹಾಯ ಮಾಡಿರುವೆ. ಹೀಗಾಗಿ ನನಗೆ ಜನರ ಆಶೀರ್ವಾದವಿದೆ, ಮತ್ತೇ ಮುಖ್ಯಮಂತ್ರಿ ಆಗುತ್ತೇನೆ ಎಂದ ಅವರು ನಂತರ ನನ್ನ ಆಡಳಿತದ ಅವಧಿಯಲ್ಲಿ ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ ನಾನು ಸಿಎಂ ಆಗಬಾರದು ಎಂದು ನನ್ನ ಎಲ್ಲಾ ವಿರೋಧಿಗಳು ಒಟ್ಟಾಗಿದ್ದಾರೆ. ದೇವರು ಒಂದೇ ಕಡೆ ಇಲ್ಲ ಎಲ್ಲ ಕಡೆ ಇದ್ದಾನೆ. ಭಕ್ತಿಯಿಂದ ಪೂಜಿಸಿದವರಿಗೆ ದೇವರು ಕಾಣುತ್ತಾನೆ. ನಾವು ಯಾರಿಗೆ ಬೇಕಾದರೂ ಮೋಸ ಮಾಡಬಹುದು. ಆದರೆ ದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಆತ್ಮ ಸಾಕ್ಷಿಗೆ ನಡೆದುಕೊಳ್ಳುವುದೇ ಮಹಾ ಪೂಜೆ ಎಂದರು.