ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೃದಯಾಘಾತದಿಂದ ಸಾವು ಎಂದು ವೀರೇಂದ್ರ ಭಗತ್ ಎಂಬುವರು ತಮ್ಮ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ಇದರಿಂದ ಮನನೊಂದು ಮೂಡಿಗೆರೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಕ್ತಾರ ಅನಂತ್ ಮೂಡಿಗೆರೆ ಠಾಣೆಯಲ್ಲಿ ವೀರೇಂದ್ರ ಭಗತ್ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಮೋಟಮ್ಮ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಹಾಕಿದ್ದಾರೆ, ಇದರಿಂದ ಕುಟುಂಬಸ್ಥರು, ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಕೂಡಲೇ ಫೇಸ್‍ಬುಕ್‍ನಲ್ಲಿ ಸಂದೇಶ ರವಾನೆ ಮಾಡಿದ ವೀರೇಂದ್ರ ಭಗತ್ ಎಂಬುವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅನಂತ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿರೋ ಮೂಡಿಗೆರೆ ಪೊಲೀಸರು ವೀರೇಂದ್ರ ಭಗತ್‍ನ ಫೇಸ್‍ಬುಕ್ ಖಾತೆಯನ್ನ ಚೆಕ್ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಕಾರ್ಯಕರ್ತರು ತಮ್ಮ ವಿರೋಧ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ತಮ್ಮ ಅಭ್ಯರ್ಥಿಗಳನ್ನ ಹಾಡಿ ಹೊಗಳೋದು ಮಾಮೂಲಿ. ಆದ್ರೆ, ಬದುಕಿರುವವರನ್ನ ಸತ್ತಿದ್ದಾರೆಂ ಅನ್ನೋದು ಆತಂಕದ ಸಂಗತಿ ಎಂದು ಮೋಟಮ್ಮ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫಸ್ಟ್ ಸುದ್ದಿಯೊದಿಗೆ ಮಾತನಾಡಿದ ಮೋಟಮ್ಮ, ಆಧುನಿಕ ಜಗತ್ತು ಸಾಮಾಜಿಕ ಜಾಲತಾಣವನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ತಿದೆ ಎಂದು ಬೇಸರ ವ್ಯಕ್ತಪಡಿಸದ್ದಾರೆ.