ಚಿಕ್ಕಮಗಳೂರು ಲಯನ್ಸ್ ಕ್ಲಬ್ ನ ನಂ.1 ಪಟ್ಟಕ್ಕೇರಿಸಬೇಕು : ನರೇಂದ್ರ ನಾಥ್ ಕರೆ

346

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಚಿಕ್ಕಮಗಳೂರು ಲಯನ್ಸ್ ಕ್ಲಬ್ ನಂ.1 ಸ್ಥಾನದಲ್ಲಿದೆ. ಕ್ಲಬ್‍ನ ರಾಜ್ಯಪಾಲರ ಎಲ್ಲ ಅಭಿಲಾಷೆಗಳನ್ನು ಅನುಷ್ಠಾನಕ್ಕೆ ತಂದು ಜಿಲ್ಲೆಯನ್ನು ಉತ್ತಮ ಸ್ಥಾನಕ್ಕೇರಿಸಬೇಕು ಎಂದು ಕ್ಲಬ್‍ನ ಪ್ರಾಂತೀಯ ಅಧ್ಯಕ್ಷ ಸಿ.ಎನ್.ನರೇಂದ್ರ ನಾಥ್ ಕರೆ ನೀಡಿದರು. ಶನಿವಾರ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಲಯಾಧ್ಯಕ್ಷರು ಹಾಗೂ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಚಾರ ಸುವ್ಯವಸ್ಥೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಕ್ಲಬ್‍ನ ಕಾರ್ಯಕ್ರಮಗಳಲ್ಲೊಂದಾಗಿದೆ. ಜನವರಿಯಲ್ಲಿ ಸಂಚಾರ ಸಪ್ತಾಹ ನಡೆಯಲಿದೆ. ಆ ಸಂದರ್ಭದಲ್ಲಿ ಕ್ಲಬ್‍ನ ರಾಜ್ಯ ಪಾಲರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆ ಸಹಕಾರ ಪಡೆದು ಜಿಲ್ಲೆಯಾದ್ಯಂತ ಎಲ್ಲ ಕಾಲೇಜುಗಳಿಗೆ ಭೇಟಿ ಮಾಡಿ ಜಾಗೃತಿ ಮೂಡಿಸುತ್ತೇವೆ ಎಂದರು.

ತಂದೆ, ತಾಯಿ ಮನೆಯಲ್ಲೇ ಮಕ್ಕಳಿಗೆ ಈ ಬಗ್ಗೆ ಮೊದಲು ತಿಳುವಳಿಕೆ ನೀಡುವ ಕೆಲಸ ಆಗಬೇಕು. ಅದು ನಮ್ಮ ಕ್ಲಬ್‍ನ ಸದಸ್ಯರ ಮನೆಯಿಂದಲೇ ಆಗಬೇಕು. ನಮ್ಮ ಪ್ರಾಂತದಲ್ಲಿ ಮೊದಲ ಆಧ್ಯತೆ ರಸ್ತೆ ಸುರಕ್ಷತೆಗೆ ನೀಡಲಾಗುವುದು ಇದಕ್ಕೆ ಎಲ್ಲ ಸದಸ್ಯರು ಸಹಕರಿಸಬೇಕು ಎಂದರು.

ನಕಾರಾತ್ಮಕ ಧೋರಣೆಗಳೇ ನಮ್ಮ ಮೊದಲ ಶತೃ. ಆರೀತಿ ಆತ್ಮ ವಿಶ್ವಾಸವನ್ನು ಕುಂದಿಸುವವರ ಬಗ್ಗೆ ಹೆಚ್ಚು ಮಹತ್ವ ನೀಡಬಾರದು ಎಂದರು. ಡಿ.30 ಕ್ಕೆ ಪ್ರಾಂತೀಯ ಸಮ್ಮೇಳನ ಕಡೂರಿನಲ್ಲಿ ನಡೆಯಲಿದೆ. ಎಲ್ಲ ಸದಸ್ಯರು ಯಶಸ್ವಿಗೆ ಸಹಕರಿಸಬೇಕು. ನಮ್ಮ ಜಿಲ್ಲೆಗೆ ಅಕ್ಷಯ ಪಾತ್ರೆ ಫೌಂಡೇಷನ್‍ನಿಂದ 5000 ಮಕ್ಕಳಿಗೆ ಪ್ರತಿ ಮಗುವಿಗೆ 1500 ರೂ. ಡೊನೇಶನ್ ಸಿಗುತ್ತದೆ. ಅದರಲ್ಲಿ 750 ರೂ. ಸರ್ಕಾರ ಕೊಡುತ್ತದೆ. ಉಳಿದ 750 ರೂ. ಪ್ರತಿಯೊಬ್ಬ ಸದಸ್ಯರು ಕೊಡುವ ಮೂಲಕ ನಮ್ಮ ಪ್ರಾಂತದ 500 ಮಕ್ಕಳಿಗೆ ಅನುಕೂಲ ಕಲ್ಪಿಸಬೇಕಿದೆ ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ವಲಯಾಧ್ಯಕ್ಷ ಹೆಚ್.ಚಂದ್ರಕಾಂತ್ ಹಳಸೆ ಮಾತನಾಡಿದರು. ಕ್ಲಬ್‍ನ ಅಧ್ಯಕ್ಷೆ ಎ.ಆರ್.ಲೇಖಾ ಮಾತನಾಡಿ, ಎರಡು ದಿನಗಳ ಪ್ರಾಂತೀಯ ಮತ್ತು ವಿಭಾಗೀಯ ಅಧ್ಯಕ್ಷರ ಭೇಟಿ ಸ್ಪೂರ್ತಿ ತಂದಿದೆ. ಕ್ಲಬ್‍ನ ರಾಜ್ಯಪಾಲರು ಸೂಚಿಸಿರುವ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಕ್ಲಬ್‍ನಲ್ಲಿ ಮಹಿಳೆಯರೇ ಹೆಚ್ಚಿದ್ದು ಸ್ವಚ್ಛತೆ ಮತ್ತು ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಸಿ.ಎಂ.ಕೀರ್ತಿಸೇಟ್, ಎಂ.ಎಸ್.ಪ್ರತಿಭಾ ಗಿರೀಶ್, ಖಜಾಂಚಿ ಲವಿತಾ ಆರ್.ಮೋಕ್ಷಾ, ಎನ್.ಲಕ್ಷ್ಮಿ ನಂಜಯ್ಯ, ಕಡೂರು ಅಧ್ಯಕ್ಷ ಮಹಮದ್ ಅಲಿ, ಮೂಡಿಗೆರೆಯ ಲೋಬೋ, ಲಯನ್ಸ್ ಮತ್ತು ಲಯನೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here