ಜೈನ ಮುನಿ ತರುಣ್ ಸಾಗರ್ ಮಹಾರಾಜ್ ಇನ್ನಿಲ್ಲ.

394
firstsuddi

ಹೊಸದಿಲ್ಲಿ : ಜೈನ ಮುನಿ, ತರುಣ್ ಸಾಗರ್ ಜಿ ಮಹಾರಾಜ್(51) ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸದ್ದಾರೆ.ಸಲ್ಲೇಖನ ವೃತದಲ್ಲಿ ನಿರತರಾಗಿದ್ದ ಅವರು ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಲ್ಲಿರುವ ಜೈನ ದೇಗುಲದಲ್ಲಿ ಮುನಿಗಳು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜಾಂಡೀಸ್ ಮತ್ತು ಇತರ ಸಮಸ್ಯೆಗಳಿಗೂ ಗುರಿಯಾಗಿದ್ದರು. ಆರೋಗ್ಯ ಗಂಭೀರ ಸ್ವರೂಪಕ್ಕೆ ತಲುಪಿದರೂ ತರುಣ್ ಸಾಗರ್ ಅವರು ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ. ದಿಗಂಬರ ಜೈನ ಪ್ರವಚನಕಾರರಾಗಿದ್ದ ಅವರಿಗೆ ದೇಶಾದ್ಯಂದ ಅಪಾರ ಅಭಿಮಾನಿಗಳಿದ್ದರು.  ಮುನಿಯ ಅವರ ಅಂತಿಮ ವಿಧಿ ವಿಧಾನಗಳು ಇಂದು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ.