ಚಿಕ್ಕಮಗಳೂರು – ಕಡೂರಿನಿಂದ ಹೊಸದುರ್ಗ ಕಡೆಗೆ ತೆರಳುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕಡೂರು ತಾಲೂಕಿನ ಗಿರಿಯಾಪುರ ಬಳಿ ಪಲ್ಟಿ ಹೊಡೆದಿದ್ದು, ಐದಕ್ಕೂ ಹೆಚ್ಚು ಮನೆಗೆ ಬೆಂಕಿ ತಗುಲಿದ್ದು, ಸುಮಾರು 100ಮೀಟರ್ ನಷ್ಟು ಅಗಲ ಬೆಂಕಿ ಆವರಿಸಿದ್ದು, ಒಬ್ಬ ವ್ಯಕ್ತಿ ಬೆಂಕಿಗೆ ಸಿಕ್ಕಿ ಸಜೀವದಹನವಾಗಿದ್ದು, ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.