ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯ…

512
firstsuddi

ಮುಜರಾಯಿ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿ ಈ ರೀತಿ ಇದೆ. ಕುಕ್ಕೆ ಸುಬ್ರಮಣ್ಯ ದೇವಾಲಯ ರಾಜ್ಯದ ಪ್ರಥಮ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಮೂರನೇ ಸ್ಥಾನದಲ್ಲಿದೆ. ನಾಲ್ಕನೆಯ ಸ್ಥಾನದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಐದನೇಯ ಸ್ಥಾನದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ, ಹಾಗೂ ಬನಶಂಕರಿ ದೇವಾಲಯ ಒಂಬತ್ತನೇ ಸ್ಥಾನದಲ್ಲಿದೆ. ಈ ದೇವಾಸ್ಥಾನಗಳು ಹುಂಡಿ ಹಣದಲ್ಲಿ ಶೇ.60ರಷ್ಟು ದೇಗುಲದ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಮುಜರಾಯಿ ಲೆಕ್ಕ ಕೊಟ್ಟಿದೆ.

  • 2017-2018ರಲ್ಲಿ ಬಂದ ಕಾಣಿಕೆ ಹಣ
    1. ಕುಕ್ಕೆ ಸುಬ್ರಹ್ಮಣ್ಯ – 95,92,54,363 ರೂ.
    2. ಕೊಲ್ಲೂರು ಮೂಕಾಂಬಿಕೆ – 43,92,09,926 ರೂ.
    3. ಚಾಮುಂಡೇಶ್ವರಿ ದೇಗುಲ – 30,40,07,300 ರೂ.
    4. ದುರ್ಗಾಪರಮೇಶ್ವರಿ ದೇಗುಲ-23,91,59,886 ರೂ.
    5. ಶ್ರೀಕಂಠೇಶ್ವರ ನಂಜನಗೂಡು-19,98,16,618.65 ರೂ.
    6. ಬೆಂಗಳೂರು ಬನಶಂಕರಿ- 8,53,77,373 ರೂ.