ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ರೇವಣ್ಣ ತಿರುಗೇಟು.

367
firstsuddi

ಹಾಸನ- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್.ಡಿ ರೇವಣ್ಣ ಸಿ.ಎಂ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಮಾತನಾಡೋದು ಸುಲಭ ಆದರೆ ಕೆಲಸ ಮಾಡುವುದು ಕಷ್ಟ. ದಿನದ 20 ಗಂಟೆಗಳು ಕುಮಾರಸ್ವಾಮಿ ಕೆಲಸ ಮಾಡ್ತಾರೆ.  ರಾಜ್ಯದ 146 ತಾಲೂಕು ಕೇಂದ್ರಗಳ ಪದವಿ ಕಾಲೇಜುಗಳಿಗೆ ಕಟ್ಟಡ ನಿರ್ಮಾಣ ಮಾಡಲು 750 ಕೋಟಿ ಅನುದಾನ ಸರ್ಕಾರ ನೀಡಿದ್ದು ಇದರಲ್ಲಿ ಉತ್ತರ ಕರ್ನಾಟಕ ಇಲ್ವ? ಕುಮಾರಸ್ವಾಮಿ, ಸಿದ್ದರಾಮಯ್ಯ ಉತ್ತರ ಕರ್ನಾಟಕ್ಕೆ ಏನು ಮಾಡಿಲ್ವ? ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಬಹಿರಂಗವಾಗಿ ಚರ್ಚೆಗೆ ಬರಲಿ ಸವಾಲು ಹಾಕಿದ್ದು, ನೀವು ಅಧಿಕಾರದಲಿದ್ದಾಗ ಯಾಕೆ ಅಭಿವೃದ್ದಿ ಮಾಡ್ಲಿಲ್ಲ ಎಂದು ಬಿ.ಜೆ.ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ಸಾಲಮನ್ನ ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರವಲ್ಲ,ಬೆಳಗಾವಿ ಜಿಲ್ಲೆ ಒಂದರಲ್ಲೆ ಎರಡು ಸಾವಿರ ಕೋಟಿ ಸಾಲಮನ್ನವಾಗತ್ತಿದ್ದು .ಉಮೇಶ್ ಕತ್ತಿಗೆ ನಾಚಿಕೆಯಾಗಬೇಕು ದೇವೇಗೌಡರು ಇಲ್ಲ ಅಂದಿದ್ರೆ  ಇವರೆಲ್ಲ ರಾಜಕೀಯಕ್ಕೆ ಬರುತ್ತಿದ್ರ ಎಂದು ಬಹಿರಂಗ ವೇದಿಕೆಯಲ್ಲಿ ಉತ್ತರ ಕರ್ನಾಟಕದ ಪ್ರತ್ಯೇಕತೆ ಬಗ್ಗೆ ರೇವಣ್ಣ ಕಿಡಿಕಾರಿದ್ದಾರೆ.