ಫಸ್ಟ್ ಸುದ್ದಿ- ರಾಯಘಡ ಜಿಲ್ಲೆಯಲ್ಲಿ ಪ್ರಗ್ಯ ಸರ್ವಾಸೆ ಎಂಬ ಮಹಿಳೆ ತನ್ನನ್ನೂ ಕಪ್ಪು ಎಂದು ಹೀಯಾಳಿಸಿದ್ದಕ್ಕೆ, ಜೂನ್ 18ರಂದು ಮಹಾಡ್ ಗ್ರಾಮದಲ್ಲಿ ತನ್ನ ಸಂಬಂಧಿ ಸುಭಾಶ್ ಮಾನೆ ಎಂಬುವರ ಗೃಹ ಪ್ರವೇಶ ಸಮಾರಂಭದಲ್ಲಿ ತಯಾರಿಸಿದ್ದ ಅಡುಗೆಗೆ ಕೀಟನಾಶಕ ಬೆರೆಸಿದ್ದು, ಆ ಆಹಾರವನ್ನು ಸೇವಿಸಿದ ಪರಿಣಾಮ ನಾಲ್ಕು ಮಕ್ಕಳು ಹಾಗೂ ಒರ್ವ ವೃದ್ದ ಮೃತಪಟ್ಟಿದ್ದಾರೆ. 80ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು,ರಾಯಘಡ ಪೋಲಿಸ್ ಠಾಣೆಯಲ್ಲಿ ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ. ಎಂದು ಪೊಲೀಸ್ ಅಧೀಕ್ಷಕ ಅನಿಲ್ ಪರಸ್ಕರ್ ಹೇಳಿದ್ದಾರೆ.