ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆಯೂ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ …

781

ಚಿಕ್ಕಮಗಳೂರು : 72ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ನಡುವೆಯೂ ಅದ್ದೂರಿಯಾಗಿ ಆಚರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಧ್ವಜಾರೋಹಣ ನೇರವೇರಿಸಿ, ಕೆಸರಿ, ಬಿಳಿ, ಹಸಿರಿ ಬಾಲೂನ್ಗಳನ್ನ ಗಾಳಿಗೆ ಹಾರಿ ಬಿಡುವ ಮೂಲಕ ಸ್ವಾತಂತ್ರ್ಯೋತ್ಸವದ ಸಂದೇಶವನ್ನ ಸಾರಿದ್ದು. ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರೆದಿದ್ದು, ನಿನ್ನೆಯ ಸಿದ್ಧಪಡಿಸಿದ್ದ ಕ್ರೀಡಾಂಗಣದಲ್ಲಿ ಮಳೆ ನೀರು ನಿಂತಿದ್ದರಿಂದ ಧ್ವಜಾರೋಹಣಕ್ಕೂ ಮುನ್ನ ಜಿಲ್ಲಾಡಳಿತ ಕ್ರೀಡಾಂಗಣಕ್ಕೆ ಮತ್ತೊಮ್ಮೆ ಮಣ್ಣು ಹಾಕಿಸಿದ್ದು, ಆದರೂ ಕೂಡ ಮಳೆಯ ಪ್ರಮಾಣ ಜೋರಿದ್ದ ಕಾರಣ ಪಥಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನ ರದ್ದುಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಶಾಸಕ ಸಿಟಿ ರವಿ, ಜಿಲ್ಲಾಧಿಕಾರಿ ಶ್ರೀ ರಂಗಯ್ಯ ಉಪಸ್ಥಿತರಿದ್ದರು.