ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಯುವ ಯೋಧರಂತೆ ನಮ್ಮ ಲೈನ್ ಮ್ಯಾನ್ ಗಳು…

976
ರಾಘವೇಂದ್ರ ಕೆಸವಳಲು.

ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಯುವ ಯೋಧರಂತೆ ನಮ್ಮ ಲೈನ್ ಮ್ಯಾನ್ ಗಳು, ಸಾರ್ವಜನಿಕ ವಲಯಗಳಲ್ಲಾಗಲೀ, ಯಾವುದೇ ಮಾಧ್ಯಮಗಳಲ್ಲಾಗಲೀ ಇವರ ಸೇವೆಯನ್ನು ಗುರುತಿಸಿ ಶ್ಲಾಘಿಸುವ ಕಾರ್ಯ ಬಹಳ ವಿರಳ. ಆದರೆ ಬೀದಿ ದೀಪದಿಂದ ಹಿಡಿದು ಆಸ್ಪತ್ರೆಯ ಲೈಟ್ ವರೆಗೂ, ಪ್ರತಿ ಮನೆಯಿಂದ ಹಿಡಿದು ದೊಡ್ಡ ದೊಡ್ಡ ಕಾರ್ಖಾನೆಗಳ ಬಳಕೆಗೂ ಯಾವುದೇ ಹೊಗಳಿಕೆಯನ್ನು ನಿರೀಕ್ಷಿಸದೆ ವಿದ್ಯುತ್ ಹರಿಸುವ ಕೆಲಸವನ್ನು ಲೈನ್ ಮ್ಯಾನ್ ಗಳು ಹಗಲುರಾತ್ರಿಯೆನ್ನದೆ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ.

ಅದರಲ್ಲೂ ಮಳೆಗಾಲದ ಇವರ ಕೆಲಸ ಪ್ರತಿಕ್ಷಣಕ್ಕೂ ಜೀವವನ್ನು ಪಣಕ್ಕಿಟ್ಟಂತೆ ಕೆಲವು ಗಂಟೆ ಅಥವಾ ಒಂದೆರಡು ದಿನಗಳ ವಿದ್ಯುತ್ ವ್ಯತ್ಯಯಕ್ಕೆ ಹೊಂದಿಕೊಳ್ಳಲಾಗದೆ ವಿದ್ಯುತ್ ನಿಗಮದವರನ್ನು ನಾವು ಶಪಿಸಲಾರಂಭಿಸುತ್ತೇವೆ.ಆದರೆ ಸುರಿಯುವ ಮಳೆಯಲ್ಲಿ ಒದ್ದೆಯಾದ ವಿದ್ಯುತ್ ಕಂಬಗಳ ಮೇಲೇರಿ ತಂತಿಗಳ ಮರು ಜೋಡಣೆ ಮಾಡುವುದು ನಿಜಕ್ಕೂ ಸಾಹಸವೇ ಸರಿ. ಕೆಲವೊಮ್ಮೆ ಟ್ರಾನ್ಸ್ ಫಾರ್ಮರ್ ಗಳಲ್ಲಿನ ಅಥವಾ ಮುಖ್ಯ ಘಟಕಗಳಲ್ಲಿನ ಕನೆಕ್ಷನ್ ತಪ್ಪಿಸಿದರೂ ಕೂಡ ಶಾರ್ಟ್ ಸರ್ಕ್ಯೂಟ್ ನಿಂದ ಹಲವಾರು ಲೈನ್ ಮ್ಯಾನ್ ಗಳು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಇತರರ ಮನೆ ದೀಪ ಬೆಳಗಿಸಲು ಪ್ರಯತ್ನಿಸುವ ಲೈನ್ ಮ್ಯಾನ್ ಗಳು ಸದಾ ಹೈ ವೋಲ್ಟೇಜ್ ವೈರ್ ಗಳ ನಡುವೆ ಕೆಲಸ ಮಾಡುತ್ತಾ ಎಷ್ಟೋ ಬಾರಿ ತಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಲೈನ್ ಮ್ಯಾನ್ ಗಳು ಪ್ರಾಣ ತೆರುವುದು ಎಷ್ಟು ನ್ಯಾಯ.
ಮಳೆಗಾಲದ ನಿಜವಾದ ಹೀರೋಗಳಾದ ಈ ಲೈನ್ ಮ್ಯಾನ್ ಗಳು ಕರ್ತವ್ಯಕ್ಕೆ ಪೂರಕವಾದ ಜೀವರಕ್ಷಕ ಉಪಕರಣಗಳನ್ನು ಸಂಬಂಧಪಟ್ಟ ಇಲಾಖೆಗಳು ಅವುಗಳ ಬಳಕೆಯ ಮಾಹಿತಿ ಹಾಗೂ ತರಬೇತಿಯೊಂದಿಗೆ ನೀಡಿದರೆ ಇವರ ಸೇವಾ ಸಮಯದಲ್ಲಿ ಆಗುವ ದುರ್ಘಟನೆಗಳನ್ನು ತಡೆಗಟ್ಟಬಹುದು. ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುವ ಲೈನ್ ಮ್ಯಾನ್ ಗಳಿಗೆ ಫಸ್ಟ್ ಸುದ್ದಿ ಬಳಗ ಅಭಿನಂದಿಸುತ್ತದೆ.