ಪ್ರೀತಿಯ ಬಲೆಗೆ ಬಿದ್ದ ಮೇಲೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ ?

948

ಫಸ್ಟ್ ಸುದ್ದಿ : ಪ್ರೀತಿಯೆಂಬುದು ಮಾಯೆಯಿದ್ದಂತೆ ಈ ಪ್ರೀತಿಯಲ್ಲಿ ಬಿದ್ದ ಮೇಲೆ ಪಕ್ಕದಲ್ಲಿ ಯಾರೇ ಇದ್ದರೂ ಕಾಣುವುದೇ ಇಲ್ಲ. ಪೋನು ಹಾಗೂ ಅವರ ಪ್ರೀತಿ ಎರಡನ್ನು ಬಿಟ್ಟು ಮತ್ತಾವೂದೂ ಅವರ ಕಣ್ಣಿಗೆ ಕಾಣುವುದಿಲ್ಲ. ಪಕ್ಕದಲ್ಲಿರುವುದು ಕಾಣುವುದಿರಲಿ ತಮ್ಮ ದೇಹದಲ್ಲಿ ಏನೇ ಆದರೂ ಅವರಿಗೆ ತಿಳಿದೇ ಇರುವುದಿಲ್ಲ. ಪ್ರೀತಿಯಿಂದ ನಂತರ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬುದು ಇಲ್ಲಿದೆ ನೋಡಿ..

ಪ್ರೀತಿಯ ಮೋಹದ ಬಲೆ ಬಿದ್ದವರಿಗೆ ಪ್ರಪಂಚ ಪೂರ್ತಿಯಾಗಿ ಸುಂದರವಾಗಿದೆ ಹಾಗೂ ಎಲ್ಲರೂ ಬಹಳ ಒಳ್ಳೆಯವರು ಎಂದು ಅನಿಸುತ್ತದೆ. ಅವರು ತಮ್ಮ ಮನಸಿನಲ್ಲಿ ಯಾವಾಗಲೂ ಉತ್ತಮ ವಿಚಾರವನ್ನೆ ಯೋಚನೆ ಮಾಡುತ್ತಿರುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರೀತಿ ಎಂದರೆ ಅದೊಂದು ಸಕಾರಾತ್ಮಕ ಅಂಶವಾಗಿದೆ. ಇದು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಪ್ರೀತಿಯಲ್ಲಿ ಬಿದ್ದವರು ಎಲ್ಲವನ್ನೂ ಮರೆಯುತ್ತಾರೆ. ಅವರಿಗೆ ತಮ್ಮ ಸಂಗಾತಿಯಲ್ಲದೆ ಬೇರೆ ಯಾರು ಸಹ ನೆನಪಾಗೋದಿಲ್ಲ. ಯಾಕೆಂದರೆ ಪ್ರೀತಿಯಲ್ಲಿ ಎಲ್ಲಾ ವ್ಯಕ್ತಿಗಳು ತಮ್ಮ ಸಂಗಾತಿಯ ಬಗ್ಗೆಯೇ ಯೋಚಿಸುತ್ತಾರೆ. ಇದರಿಂದ ಅವರು ಎಲ್ಲವನ್ನೂ ಮರೆಯುತ್ತಾರೆ. ಪ್ರೀತಿಯಲ್ಲಿ ಮುಳುಗಿದವರು ಯಾವಾಗಲೂ ತಮ್ಮ ಸಂಗಾತಿಯ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಇದರಿಂದಾಗಿ ಅವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ.

ಪ್ರೀತಿ ಎಂದರೆ ಅಲ್ಲಿ ಅಸೂಯೆ ಹೆಚ್ಚಿರುತ್ತದೆ. ಸಂಗಾತಿ ಯಾರ ಬಳಿಯಾದರೂ ಮಾತನಾಡಿದರೆ ಇವರಿಗೆ ಇಷ್ಟವಾಗೋದಿಲ್ಲ. ಅವರಿಗೆ ಈ ರೀತಿ ಮಾಡಿದರೆ ಅಸೂಯೆ ಉಂಟಾಗುತ್ತದೆ. ಪ್ರೀತಿಯಲ್ಲಿ ಬಿದ್ದ ಮೇಲೆ ಹೃದಯ ಯಾರದೋ ಮುಷ್ಟಿಯಲ್ಲಿ ಇರುವಂತೆ ಭಾಸವಾಗುತ್ತದೆ. ಪ್ರೇಮ ಖೈದಿಯಾದವರ ಹೃದಯದ ಬಡಿತವೂ ಹೆಚ್ಚಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಗಳು ಒಂದು ವಿಚಿತ್ರ ವೇದನೆಯಲ್ಲಿ ನರಳುತ್ತಾರೆ. ಇದರಿಂದಾಗಿಯೇ ಅವರ ಹೃದಯ ಬಡಿತ ಹೆಚ್ಚಾಗುತ್ತದೆ.

 

LEAVE A REPLY

Please enter your comment!
Please enter your name here