ಮಲೆನಾಡಿನ ಗಾಳಿ ಮಳೆಗೆ ಜನ ಕಂಗಾಲಾಗಿದ್ದಾರೆ…

658
FIRSTSUDDI

ಚಿಕ್ಕಮಗಳೂರು -ಕಳೆದ ಹತ್ತು ದಿನಗಳಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಮಳೆ ಕೆಲ ಭಾಗದಲ್ಲಿ ಹಾಗೇ ಮುಂದುವರೆದಿದ್ದು, ಮೂಡಿಗೆರೆ, ಕಳಸ,ಕುದುರೆಮುಖ, ಬಾಳೆಹೊನ್ನೂರು, ಶೃಂಗೇರಿಯ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರೋ ಮಳೆಗೆ ಮಲೆನಾಡಿನ ಜನ ಕಂಗಾಲಾಗಿದ್ದಾರೆ. ಅರ್ಧಗಂಟೆಗೊಮ್ಮೆ ಬಿಡುವು ನೀಡಿ ಭಾರೀ ಗಾಳಿಯೊಂದಿಗೆ ಸುರಿಯುತ್ತಿರೋ ಮಳೆ ಮಲೆನಾಡಿಗರ ನಿದ್ದೆಗೆಡಿಸಿದೆ. ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಸಾಧಾರಣ ಮಲೆಯಾಗ್ತಿದ್ದು ಸುತ್ತಮುತ್ತಲಿನ ನದಿ-ಹಳ್ಳ-ಕೊಳ್ಳಗಳೆಲ್ಲಾ ಮೈದುಂಬಿ ಹರಿಯುತ್ತಿವೆ. ಮಲೆನಾಡಿನಾದ್ಯಂತ ಭಾರೀ ಗಾಳಿಯೊಂದಿಗೆ ಸುರಿಯುತ್ತಿರೋ ಮಳೆಯಿಂದ ಮರದ ಟೊಂಗೆಗಳು ವಿದ್ಯುತ್ ತಂತಿ ಮೇಲೆ ಹರಿದು ಬಿದ್ದು ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ಇಷ್ಟು ದಿನ ಮಳೆಯಿಂದ ಆತಂಕಕ್ಕೀಡಾಗಿದ್ದ ಮಲೆನಾಡಿಗರು ಇದೀಗ ಮಲೆನಾಡಿನ ಗಾಳಿ ರಭಸಕ್ಕೆ ಮತ್ತಷ್ಟು ಗಾಬರಿಗೊಂಡಿದ್ದಾರೆ.