ಮಂಗಳೂರಿನ ಖಾಸಗಿ ಕಂಪನಿಯ ಇಂಜಿನಿಯರ್ ಭದ್ರ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವು…

594
firstsuddi

ಕಳಸ: ಭದ್ರಾ ನದಿಯ ಅಂಬಾ ತೀರ್ಥದಲ್ಲಿ ಪ್ರವಾಸಕ್ಕೆಂದು ಬಂದ ವ್ಯಕ್ತಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರಿನ ತುಂಬೆ ಎಂಬಲ್ಲಿಯ ಕಿರಣ್ ಕೋಟ್ಯಾನ್(26) ಎಂಬ ವ್ಯಕ್ತಿ ನದಿಗೆ ಬಿದ್ದು ಕೊಚ್ಚಿ ಹೋಗಿದ್ದು ಮಂಗಳೂರಿನ ಖಾಸಾಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ತನ್ನ 12 ಜನ ಸ್ನೇಹಿತರ ಜೊತೆಗೂಡಿ ಕುದುರೆಮುಖ,ಸಂಸೆ,ಕಳಸಕ್ಕೆ ಭೇಟಿ ನೀಡಿ,ನಂತರ ಅತ್ಯಂತ ಅಪಾಯಕಾರಿ ಪ್ರದೇಶವಾದ ಅಂಬಾ ತೀರ್ಥಕ್ಕೆ ಭೇಟಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಬಂಡೆಯ ಮೇಲೆ ನಿಂತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದ್ದು, ಕಳೆದ ಕೆಲ ತಿಂಗಳಿನಿಂದ ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಂಡೆ ಕಲ್ಲುಗಳು ಪಾಚಿ ಕಟ್ಟಿದ್ದು ತುಂಬಿ ಹರಿಯುವ ನೀರಿನ ಮದ್ಯೆ ಕಾಣಿಸಿಕೊಳ್ಳುತ್ತಿದ್ದ ಅಪಾಯಕಾರಿ ಬಂಡೆ ಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ ಈ ಸಂದರ್ಭದಲ್ಲಿ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದು,

firstsuddi

ತುಂಬಿ ಹರಿಯುತ್ತಿರುವ ನದಿಯಲ್ಲಿ ಎಷ್ಟೇ ಹುಡುಕಾಡಿದರೂ ಕೂಡ ಮೃತದೇಹ ಪತ್ತೆಯಾಗಿಲ್ಲ.ಅಗ್ನಿಶಾಮಕ ದಳ, ಸ್ಥಳಿಯರು,ಪೊಲೀಸರು ನದಿಯ ಹೆಬ್ಬಾಳೆ ವಶಿಷ್ಠ ತೀರ್ಥ ಹಾಗೂ ನದಿಯ ಅಂಚಿನ ಉದ್ದಕ್ಕೂ ಹುಡುಕಾಟ ನಡೆಸುತ್ತಿದ್ದಾರೆ.