ಬೆಂಗಳೂರು- ಮನೋರಾಯನ ಪಾಳ್ಯದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಜೊಸೆಪ್ ಪುಸಲಾಯಿಸಿ ಮೂರು ದಿನಗಳ ಹಿಂದೆ ಕೊಡಿಗೇನಹಳ್ಳಿಯ ಪಾರ್ಕ್ ಬಳಿಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಸುಬಾಷ್ ಹಾಗೂ ಸಂತೋಷ್ ಜೊತೆ ಸೇರಿಕೊಂಡು ಬಾಲಕಿಯನ್ನು ಅಪಹರಿಸಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು. ಬಾಲಕಿಯನ್ನು ನಿನ್ನೆ ಆರೋಪಿಗಳು ಮನೆಗೆ ಬಿಟ್ಟು ಹೋಗಿದ್ದು ಈ ಬಗ್ಗೆ ಬಾಲಕಿ ಹಾಗೂ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು ಹೆಬ್ಬಾಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.