ಪರಿಸರ ಉಳಿಸುವ ಕೆಲಸ ಮಾಡುವುದು ಸ್ವಾಗತರಹ ಆದರೆ ಸಾಮಾನ್ಯ ಜನಗಳ ಸಮಸ್ಯೆ ನಿಮಗೆ ಏಕೆ ಕಾಣುತ್ತಿಲ್ಲ? – ಎಂ ಕೆ ಪ್ರಾಣೇಶ್

488
firstsuddi

ಮೂಡಿಗೆರೆ- ಭಾರತ್ ಮಾಲ ಪರಿಯೋಜನಾ ಯೋಜನೆ ಯಡಿಯಲ್ಲಿ ನೆಲ್ಯಾಡಿ – ಚಿತ್ರದುರ್ಗ ಛತ್ರಪದ ರಸ್ತೆಯ ಜನಾಭಿಪ್ರಾಯ ಸಂಗ್ರಹ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ಅವರು ಭಾರತ ಸರ್ಕಾರದ ಭಾರತ್ ಮಾಲ ಯೋಜನೆ ಚಿತ್ರದುರ್ಗದಿಂದ ನೆಲ್ಯಾಡಿವರೆಗೆ ರಸ್ತೆಯಾಗುತ್ತಿರುವುದು ಸಂತೋಷವಾದ ವಿಚಾರ. ಮೂಡಿಗೆರೆಯಿಂದ ಮಂಗಳೂರು ತೆರಳಲು ನಾಲ್ಕು ಗಂಟೆ ತಗಲುತ್ತದೆ.ಈ ವರ್ಷ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಕುಸಿದು ಹೋಗಿದ್ದು, ನಮಗೆ ಪರ್ಯಾಯ ರಸ್ತೆಗಳಿಲ್ಲ, ಇಂತಹ ಒಳ್ಳೆಯ ಯೋಜನೆಗೆ ಪರಿಸರವಾದಿಗಳ ಹೆಸರಿನಲ್ಲಿ ಈ ಯೋಜನೆಗೆ ವಿರೋಧ ಮಾಡುತ್ತಿರುವುದು ದುರಾದೃಷ್ಟಕರ. ನಾನು ಯಾವ ಪರಿಸರವಾದಿಗಳ ವಿರೋಧಿಯಲ್ಲ, ನೀವು ಪರಿಸರ ಉಳಿಸುವ ಕೆಲಸ ಮಾಡುವುದು ಸ್ವಾಗತರಹ ಆದರೆ ನಿಮಗೆ ಜನಗಳ ಸಮಸ್ಯೆ ಏಕೆ ಕಾಣುತ್ತಿಲ್ಲ?ಎಂದು ಪರಿಸರವಾದಿಗಳಿಗೆ ಪ್ರಶ್ನಿಸಿದರು.ಇಂತಹ ಯೋಜನೆಗೆ ದಯವಿಟ್ಟು ತೊಂದರೆ ಕೊಡಬೇಡಿ ಎಂದರು.
ಜಿಲ್ಲಾಧಿಕಾರಿ ಶ್ರೀ ರಂಗಯ್ಯ ಮಾತನಾಡಿ ನೆಲ್ಯಾಡಿಯಿಂದ ಚಿತ್ರದುರ್ಗ ಕ್ಕೆ 232 ಕಿ.ಮೀ, ರಸ್ತೆ ಈ ಯೋಜನೆಯಡಿ ಆಗಲಿದ್ದು, ಶಿಶಿಲ,ಬೈರಪುರ ಹಾದುಹೋಗುವ ರಸ್ತೆಯಲ್ಲಿ ಕೇವಲ 2.4 ಕಿ.ಮೀ, ಬಾಳೂರು ರಕ್ಷಿತ ಅರಣ್ಯದಲ್ಲಿ ಹಾದು ಹೋಗಲಿದ್ದು, ಉಳಿದ ಭೂಮಿಯೂ ಖಾಸಗಿ ಭೂಮಿಯಲ್ಲಿ ಹಾದು ಹೋಗುತ್ತದೆ. ಮೊದಲನೆ ಪ್ಯಾಕೇಜ್ ನಲ್ಲಿ ನೆಲ್ಯಾಡಿ – ಮೂಡಿಗೆರೆ,ಹ್ಯಾಂಡ್ ಪೊಸ್ಟ್ ವರೆಗಿನ 68.9 ಕಿ.ಮೀಗೆ 3789.5 ಕೋಟಿ ರೂ ವೆಚ್ಚವಾಗಲಿದ್ದು,ಎರಡನೆ ಪ್ಯಾಕೇಜ್ ಮೂಡಿಗೆರೆ ಹ್ಯಾಂಟ್ ಪೊಸ್ಟ್ ನಿಂದ ಚಿಕ್ಕಮಗಳೂರು ಬೈಪಾಸ್ ವರೆಗೆ 46.1 ಕಿ.ಮೀಗೆ 1301.03 ಕೋಟಿ ರೂ ವೆಚ್ಚವಾಗಲಿದ್ದು ಹಾಗೂ ಮೂರನೆ ಪ್ಯಾಕೇಜ್ ಚಿಕ್ಕಮಗಳೂರು ಬೈಪಾಸ್ ನಿಂದ ತಮಟದಹಳ್ಳಿ ವರೆಗೆ 56 ಕಿ.ಮೀಗೆ 947.8 ಕೋಟಿ ರೂ ವೆಚ್ಚವಾಗಲಿದ್ದು, ತಮಟದಹಳ್ಳಿಯಿಂದ ಚಿತ್ರದುರ್ಗದವರೆಗೆ 61 ಕಿ.ಮೀಗೆ 968 ಕೋಟಿ ರೂ ವೆಚ್ಚವಾಗಲಿದ್ದು, ಒಟ್ಟು 7007.32 ಕೋಟಿ ರೂ ವೆಚ್ಚವಾಗಲಿದ್ದು, ಇದರಲ್ಲಿ ರಸ್ತೆ ಹೋಗುವ ಜಾಗದಲ್ಲಿ ಭೂಮಿ ಕಳೆದುಕೊಂಡವರಿಗೆ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಬೆಲೆಯ ನಾಲ್ಕು ಪಟ್ಟು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳಿಗೆ ಸರ್ಕಾರಿ ಬೆಲೆಯ ಎರಡು ಪಟ್ಟು ಪರಿಹಾರ ನೀಡಲಾಗುವುದು, ಮತ್ತು ನಮೂನೆ 53 ರಲ್ಲಿ ಅರ್ಜಿ ಸಲ್ಲಿಸಿದ್ದು ಹಲವು ವರ್ಷಗಳಿಂದ ಸಾಗು ಮಾಡಿತ್ತಿದ್ದ ರೈತರಿಗೂ ಪರಿಹಾರ ಕೊಡಬೇಕು ಎಂಬ ರೈತರ ಪ್ರಶ್ನೆಗೆ ಈ ವಿಚಾರದ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ನೆಲ್ಯಾಡಿ- ಮೂಡಿಗೆರೆ ಹ್ಯಾಂಡ್ ಪೊಸ್ಟ್ ರಸ್ತೆ 68.9 ಕಿ.ಮೀ ರಸ್ತೆ ಯಾಗಲಿದ್ದು ಇದರಲ್ಲಿ 10 ಪ್ರಮುಖ ಸೇತುವೆಗಳು ,20 ಸಣ್ಣ ಸೇತುವೆಗಳು ,ಹಾಗೂ 4 ಜಾನುವಾರುಗಳ ಸಂಚಾರಕ್ಕೆ ತಳಮಟ್ಟದ ಮಾರ್ಗ ಮತ್ತು 19 ಬಸ್ ತಂಗುದಾಣ ಹಾಗೂ ಟ್ರಕ್ ಬೇ, 20 ಬೃಹತ್/ಸಣ್ಣ ಜಂಕ್ಷನ್ ಗಳು ನಿರ್ಮಾಣವಾಗುತ್ತದೆ. 3789.5 ಕೋಟಿ ರೂ ವೆಚ್ಚವಾಗಲಿದೆ ಎಂದರು.
ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ಇದು ಒಂದು ಉತ್ತಮ ಯೋಜನೆ ಊರುಬಗೆ ಗ್ರಾಮಪಂಚಾಯಿತಿ ಜನರಿಗೆ ಈ ರಸ್ತೆ ಹಾದು ಹೋಗುತ್ತಿರುವುದು ಅದೃಷ್ಟ. ಈ ಕೆಲಸಕ್ಕೆ ಪರಿಸರವಾದಿಗಳ ಹೆಸರಿನಲ್ಲಿ ಯಾರೇ ಅಡ್ಡ ಬಂದರು ಈ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.ನಾವು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಸಹಕಾರನ್ನು ಮಾಡುತ್ತೇವೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ರತನ್ ಮಾತನಾಡಿ ಸದಾನಂದಗೌಡರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಪರಿಸರವಾದಿಗಳು ಕೂಡ ಎಲ್ಲ ನಮ್ಮವರೇ ಕೂತು ಮಾತನಾಡೋಣ ಈ ಯೋಜನೆಗೆ ಪಕ್ಷ ಬೇಧ ಮರೆತು ನಾವು ಕೆಲಸ ಮಾಡಲು ಸಿದ್ದ ಎಂದರು

ಮೂಡಿಗೆರೆ ತಾಲೂಕಿನಲ್ಲಿ ಹಾದು ಹೋಗುವ ರಸ್ತೆಯ ವಿವರ.

 

ನಡುವಿನ ಮಾಡ್ಕಲ್ ,ಹೆಸಗಲ್, ಕೊಲ್ಲಿಬೈಲ್, ಕರಡಗೂಡು, ಬಿಳಗುಳ, ಕಡುವಳ್ಳಿ,ಬೀಜುವಳ್ಳಿ , ಕುನ್ನಳ್ಳಿ, ಹಳಸೆ, ಹಳೇಕೋಟೆ, ಬಕ್ಕಿ, ಕೆಸವಳಲು ಕಾಫೀ ಎಸ್ಟೇಟ್, ಪಟ್ಟದೂರು, ಹಳೆಕೆರೆ , ಊರುಬಗೆ, ಬೈರಾಪುರ ಕಾಫೀ ಎಸ್ಟೇಟ್ ಮಾರ್ಗವಾಗಿ ಶಿಶಿಲ, ನೆಲ್ಯಾಡಿ ಗೆ ತಲುಪುತ್ತದೆ.