ಮೂಡಿಗೆರೆ ಧನ್ಯಶ್ರೀ ಸಾವಿನ ಸುತ್ತ ಅನುಮಾನದ ಹುತ್ತ… ?

1641

ಮೂಡಿಗೆರೆ : ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಫಸ್ಟ್ ಬಿಕಾಂ ಓದುತ್ತಿದ್ದ 20 ವರ್ಷದ ಧನ್ಯಶ್ರೀ ಸಾವಿನ ಹಿಂದೆ ಅನುಮಾನಗಳ ಹುತ್ತ ಬೆಳೆದಿದೆ. ಆದ್ರೆ, ಆಕೆಯ ತಂದೆ ಮೂಡಿಗೆರೆ ಠಾಣೆಯಲ್ಲಿ ಯಾವಾಗಲು ಮೊಬೈಲ್‍ಲ್ಲಿ ಇರುತ್ತೀಯಾ, ಓದುವುದಿಲ್ಲ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ನೀಡಿದ್ದಾರೆ. ಎಫ್ ಐ ಆರ್ ಕೂಡ ಅದೇ ರೀತಿ ದಾಖಲಾಗಿದೆ. ಆದ್ರೆ, ಧನ್ಯಶ್ರೀ ಮೊಬೈಲ್‍ನಲ್ಲಿ ತನ್ನ ಸ್ನೇಹಿತನ ಜೊತೆ ತುಳುವಿನಲ್ಲಿ ಮಾಡಿರೋ ಮೆಸೇಜ್‍ಗಳನ್ನ ನೋಡುದ್ರೆ ಈ ಸಾವು ಮೊಬೈಲ್‍ಗಾಗಿ ಆಗಿರುವಂತದ್ದಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬರ್ತಿದೆ. ಯಾಕಂದ್ರೆ, ಧನ್ಯಶ್ರೀ ಆ ಮೇಸೆಜ್‍ಗಳಲ್ಲಿ ಅನ್ಯಕೋಮಿನ ಪರ ಮಾತನಾಡಿದ್ದಾಳೆ. ಸಾಲದಕ್ಕೆ ಐ ಲವ್ ದೆಮ್ ಎಂದು ಮೇಸೆಜ್ ಮಾಡಿರೋದ್ರ ಜೊತೆ ಇದೇ ವಿಚಾರವಾಗಿ ಆತನೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾಳೆ. ಅವಳೊಂದಿಗೆ ಮೆಸೇಜ್‍ನಲ್ಲಿ ಮಾತನಾಡಿದ ಸ್ನೇಹಿತ ಆ ಸಂದೇಶಗಳನ್ನ ಸ್ಕ್ರೀನ್ ಶಾಟ್ ಮಾಡಿ ಕೆಲ ಸಂಘಟನೆಗಳ ಗುಂಪಿಗೆ ಹಾಕಿದ್ದಾನೆ.

ಆ ಸಂಘಟನೆಯವ್ರು ಧನ್ಯಶ್ರೀ ಮನೆಗೆ ಹೋಗಿ ನಿಮ್ಮ ಮಗಳು ಅನ್ಯ ಕೋಮಿನ ಹುಡುಗನ ಜೊತೆ ಓಡಾಡುತ್ತಿದ್ದಾಳೆ. ಸ್ವಲ್ಪ ಬುದ್ಧಿ ಹೇಳಿ ಎಂದು ಹೇಳಿ, ಆಕೆಗೂ ಹೆದರಿಸಿದ್ದಾರೆ. ಆಕೆಯ ಬಗ್ಗೆ ವಾಟ್ಸಾಪ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಇದೆಲ್ಲಾ ಧನ್ಯಶ್ರೀಗೆ ಗೊತ್ತಾಗಿದ್ದು, ಆಕೆ ಬಗ್ಗೆ ವಾಟ್ಸಾಪ್‍ನಲ್ಲಿ ಮಾತನಾಡಿರೋದೆಲ್ಲಾ ಈಕೆಗೆ ಗೊತ್ತಾಗಿದೆ. ಆಗ ನನ್ನ ಬಗ್ಗೆ ಎಲ್ಲಾ ಹೀಗೆ ಮಾತನಾಡ್ತಿದ್ದಾರೆಂದು ಮನದೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದ್ರೆ, ಧನ್ಯಶ್ರೀ ಮೊಬೈಲ್‍ನಲ್ಲಿ ತುಳುವಿನಲ್ಲಿ ಮಾತನಾಡಿರೋ ಹುಡುಗ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಬೆಳ್ತಂಗಡಿ ಮೂಲದವನು ಎಂದು ಹೇಳಲಾಗ್ತಿದೆ. ಅವನು ಯಾರು ಅನ್ನೋದು ಗೊತ್ತಾದ್ರೆ ಈ ಸಾವಿಗೆ ಕಾರಣ ಎನೂ ಅನ್ನೋದು ಹೊರಬರಲಿದೆ. ಈ ವಿಷಯ ತಿಳಿದ ಅಪ್ಪ ಆಕೆಗೆ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಸಾಲದಕ್ಕೆ ಈ ವಿಷಯ ಮನೆಯ ಅಕ್ಕಪಕ್ಕದವರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ಗೊತ್ತಾಯ್ತೆಂದು ಧನ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನ ಆಕೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾಳೆ. ಆದ್ರೆ, ಆ ಡೆತ್ ಪೊಲೀಸರ ಬಳಿ ಇದೆ. ಆ ಡೆತ್ ನೋಟ್‍ನಲ್ಲಿ ಆಕೆ ಸಾವಿಗೆ ನಿಜವಾದ ಕಾರಣವೂ ಇದೆ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆ ನಡೆಸಿದ್ದೇ ಆದ್ರೆ ಧನ್ಯಶ್ರಿ ಸಾವಿಗೆ ಸೂಕ್ತ ಕಾರಣ ತಿಳಿದುಬರಲಿದೆ.