ಮೂಡಿಗೆರೆ– ಚಾರ್ಮಾಡಿ ಘಾಟ್ ನಲ್ಲಿ ಸುಮಾರು ಒಂಭತ್ತು ಕಡೆ ಗುಡ್ಡ ಕುಸಿತ ಹಾಗೂ ಮರಗಳು ಬಿದ್ದಿವೆ. ಗುಡ್ಡ ಕುಸಿತದಿಂದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ನೆನ್ನೆಯಿಂದ ಉಪವಾಸವಿರುವ ಪ್ರಯಾಣಿಕರು. ಹಾಗೂ ಮಕ್ಕಳ ಹಸಿವನ್ನು ನೀಗಿಸಲು ಪೋಷಕರು ಪರದಾಡುತ್ತಿದ್ದಾರೆ. ವೃದ್ದೆಯೊಬ್ಬರು ಶುಗರ್ ಮಾತ್ರೆ ಇಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಸ್ಥಳೀಯರು ಮಾತ್ರೆ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳು ಸೇರಿದಂತೆ ಯಾರಿಗೂ ಕೂಡ ಆಹಾರದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನೂರಾರು ವಾಹನಗಳು ಸಿಲುಕಿಕೊಂಡಿದೆ. ಜೆ.ಸಿ.ಬಿ ಮೂಲಕ ಮಣ್ಣನ್ನು ತೆರವುಗೊಳಿಸಲು ಈಗಾಗಲೆ ಕಾರ್ಯಚರಣೆ ನಡೆಯುತ್ತಿದೆ. ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹಕಾರವನ್ನು ನೀಡುತ್ತಿದ್ದಾರೆ. ಸ್ಥಳೀಯರು ಈಗ ಪ್ರಯಾಣಿಕರಿಗೆ ಆಹಾರ ವಿತರಣೆಯನ್ನು ಮಾಡುತ್ತಿದ್ದಾರೆ.