ಬೆಂಗಳೂರು : ಮುಂಬರೋ ವಿಧಾನಸಭಾ ಚುನಾವಣೆಗೆ ಮಂಗಳೂರಿನ ಮೂಡುಬಿದರೆ ಕ್ಷೇತ್ರಕ್ಕೆ ಐವಾನ್ ಡಿಸೋಜ ಕಾಂಗ್ರೆಸ್ ಅಭ್ಯರ್ಥಿಯಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡುಬಿದರೆ ಕ್ಷೇತ್ರಕ್ಕೆ ಬಂದಾಗ ಈ ಬಾರಿ ಕಾಂಗ್ರೆಸ್ ಟಿಕೆಟ್ ನ ಐವಾನ್ ಡಿಸೋಜ ಅವರಿಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಸಿಎಂ ಸಿದ್ದರಾಮಯ್ಯ, ಸೋಲುವ ಭೀತಿಯಿರುವ ಶಾಸಕರ ಸೀಟ್ ಬದಲಾಯಿಸುವ ಲಕ್ಷಣಗಳಿವೆ ಎಂದು ಹೇಳಿದ್ರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆ ಈ ಬಾರಿಯ ಮೂಡುಬಿದರೆ ಕಾಂಗ್ರೆಸ್ ಟಿಕೆಟ್ ನ ಡಿಸೋಜಾರವರಿಗೆ ನೀಡಬೇಕೆಂದು ವಿನಯಪೂರ್ವಕವಾಗಿ ಸಿಎಂಗೆ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದ್ದರು. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದಾಗ ಐವಾನ್ ಡಿಸೋಜರವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗೋದ್ರ ಜೊತೆ ಜನಾಭಿಪ್ರಾಯದಲ್ಲೂ ಐವಾನ್ ಡಿಸೋಜಾಗೆ ಹೆಚ್ಚಿನ ಜನಮನ್ನಣೆ ಸಿಕ್ಕಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಸಾಲದಕ್ಕೆ ಮೂಡುಬಿದರೆಯ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ಕೆಲ ಪ್ರಮುಖ ಕಾರ್ಯಕರ್ತರು ಬೆಂಗಳೂರಿನ ಸಿಎಂ ಕಚೇಗೆ ತೆರಳಿ ಈ ಬಾರಿ ಟಿಕೆಟ್ ನ ಐವಾನ್ ಡಿಸೋಜಾಗೆ ನೀಡಬೇಕೆಂದು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಮೂಡುಬಿದರೆ ಟಿಕೆಟ್ ಐವಾನ್ ಡಿಸೋಜಾಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಸದ್ಯದ ಬೆಳವಣಿಗೆ ನೋಡಿದ್ರೆ, ಯುವಕ, ಯುವ ರಾಜಕಾರಣಿ, ಸದಾ ಜನಗಳ ಮಧ್ಯೆಯೇ ಇದ್ದು, ಜನರ ಸಮಸ್ಯೆಗೆ ಸ್ಪಂದಿಸೋ ಐವಾನ್ ಡಿಸೋಜ ಈ ಬಾರಿ ಮೂಡುಬಿದರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗೋ ಎಲ್ಲಾ ಲಕ್ಷಣಗಳಿವೆ.