ನೈತಿಕ ಪೊಲೀಸ್ ಗಿರಿಗೆ ಮೂಡಿಗೆರೆ ಧನ್ಯಶ್ರೀ ಬಲಿ, ಪ್ರಕರಣದ ಬಗ್ಗೆ ಎಸ್ಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು ಹೀಗೆ

855

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಾಲೇಜು ವಿಧ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನೈತಿಕ ಪೊಲೀಸ್ ಗಿರಿಗೆ ಯುವತಿ ಆತ್ಮಹತ್ಯೆ  ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ. ಬಿಜೆಪಿ ಯುವ ಮೋರ್ಚ ನಗರಾಧ್ಯಕ್ಷ ಹಾಗೂ ಹಿಂದು ಸಂಘಟಕರ ನೈತಿಕ ಪೊಲೀಸ್ ಗಿರಿಗೆ ಕಾಲೇಜು ಯುವತಿ ಬಲಿಯಾಗಿದ್ದಾಳೆ. ಬಿಜೆಪಿ ಯುವ ಮೋರ್ಚ ನಗರಾಧ್ಯಕ್ಷ  ಅನಿಲ್ ಬಂಧನವಾಗಿದ್ದು, ಧನ್ಯಶ್ರೀ ಜೊತೆ ಮೊಬೈಲ್ನಲ್ಲಿ ಚಾಟ್ ಮಾಡಿದ ಮಂಗಳೂರಿನ ಸಂತೋಷ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಧನ್ಯಶ್ರೀ (೨೦) ಎರಡು ದಿನದ ಹಿಂದೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಹಿಂದೂಪರ ಸಂಘಟನೆಗಳ ನೈತಿಕ ಪೊಲೀಸ್ ಗಿರಿಗೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಡಿಗೆರೆಯ ಡಿ.ಎಸ್ ಬಿ‌.ಜಿ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಧನ್ಯಶ್ರೀ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಛತ್ರ ಮೈದಾನ ಬೀದಿಯಲ್ಲಿ ವಾಸವಿದ್ದಳು. ತನ್ನ ಗೆಳೆಯನ ಜೊತೆ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡಿದ್ದ ಧನ್ಯಶ್ರೀ, ಐ ಲವ್ ಮುಸ್ಲಿಂ ಎಂದು ವಾಟ್ಸ್ ಅಪ್ ನಲ್ಲಿ ಮೆಸೇಜ್ ಮಾಡಿದ್ದ ಧನ್ಯಶ್ರೀ, ಅನ್ಯ ಧರ್ಮೀಯ ಹುಡುಗನ ಜೊತೆ ಸ್ನೇಹ ಮಾಡದ ಹಾಗೆ ವಾಟ್ಸ್ ಅಪ್ ನಲ್ಲಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಧನ್ಯಶ್ರೀ ಮಾಡಿದ ವಾಟ್ಸ್ ಅಪ್ ಮೆಸೇಜ್ ನ ಸ್ಕ್ರೀನ್  ಶಾಟ್ ಮಾಡಿ ವಾಟ್ಸಾಪ್ ನಲ್ಲಿ ಹರಿಬಿಟ್ಟ ಸ್ನೇಹಿತ ಸಂತೋಷ್, ಮೂಡಿಗೆರೆ ಬಜರಂಗದಳದ,ಹಿಂದೂಪರ ಸಂಘಟನೆಗಳ ಗ್ರೂಪ್ ಗೆ ಹಾಕಿದ್ದಾನೆ. ಈ ಹಿನ್ನೆಲೆ ಧನ್ಯಶ್ರೀ ಮಾಡಿದ ಮೆಸೇಜ್ ವೈರಲ್ ಆದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.