ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ಹಾಡಿ, ಕುಣಿಯುತ್ತಿರೋ ಮೂಡಿಗೆರೆ ಯ ಕಿಶನ್ ಅಶೋಕ್ ಬಿಳಗಲಿ.

2178
colours
  • ರಾಘವೇಂದ್ರ ಕೆಸವಳಲು

ಮೂಡಿಗೆರೆ : ಮಲೆನಾಡಿನ ಕಾಫಿ ಸಾಹುಕಾರರ ಮಕ್ಕಳು ಕಾಫಿ ಪ್ಲಾಂಟರ್ಗಳೇ ಆಗ್ತಾರೆ ಅನ್ನೋ ಮಾತನ್ನ ಮಲೆನಾಡಿಗರು ಸುಳ್ಳಾಗಿಸ್ತಿದ್ದಾರೆ. ಕಾಫಿ ಪ್ಲಾಂಟರ್ಗಳ ಮಕ್ಕಳು ಹೊರರಾಜ್ಯದಲ್ಲಿ ವಿವಿಧ ಕಲೆಗಳ ಮೂಲಕ ಮಲೆನಾಡಿನ ಕಾಫಿಯ ಸುವಾಸನೆಯಂತೆ ತಮ್ಮ ಕಲೆಗಳನ್ನ ಪ್ರದರ್ಶನಕ್ಕಿಟ್ಟು ಮಲೆನಾಡಿನ ಹೆಸರನ್ನ ದೇಶದೆಲ್ಲೆಡೆ ಹರಡುತ್ತಿದ್ದಾರೆ. ಯಾಕಂದ್ರೆ, ಮೂಡಿಗೆರೆಯ ದಿವಂಗತ ಸುಮ ಅಶೋಕ್ ಹಾಗೂ ಬಿ.ಪಿ ಅಶೋಕ್ ಇವರ ಪುತ್ರ ಕಿಶನ್ ಬಿ.ಎ.ಬಿಳಗಲಿ ಎಂಬ 28 ವರ್ಷದ ಯುವಕ ಖಾಸಗಿ ಹಿಂದಿ ವಾಹಿನಿಯಲ್ಲಿ ನಡೆಯುತ್ತಿರೋ ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ಹಾಡಿ, ಕುಣಿಯುತ್ತಿರೋ ಕರ್ನಾಟಕದ ಏಕೈಕ ಯುವಕ. ಮೂರು ಹಂತದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಎರಡನೇ ಜನರೇಶನ್ನ ಹಂತದಲ್ಲಿ ಅಂತಿಮವಾಗಿ ಉಳಿದಿರೋ ಐವರಲ್ಲಿ ಈತನೂ ಒಬ್ಬ.

ಈತನ ಡ್ಯಾನ್ಸ್ಗೆ ನಟಿ ಮಾಧುರಿ ದೀಕ್ಷಿತ್ ಕೂಡ ಹಾಡಿ ಹೊಗಳಿದ್ದಾರೆ. ಕರ್ನಾಟಕ ಹಾಗೂ ಮಲೆನಾಡಿಗೆ ಕೀರ್ತಿ ತಂದಿರೋ ಈತನಿಗೆ ಮಲೆನಾಡಿಗರು ಶಹಬ್ಬಾಸ್ ಅಂದಿದ್ದಾರೆ.