ಬಿಜಿಎಸ್ ಆಯ್ತು ಮೂಡಿಗೆರೆ ಒಕ್ಕಲಿಗರ ಶಾಲೆ, ಇದು ಫಸ್ಟ್ ಸುದ್ದಿ ಹೋರಾಟಕ್ಕೆ ಸಂದ ಜಯ

1175

ಮೂಡಿಗೆರೆ : ಮೂಡಿಗೆರೆಯಲ್ಲಿ 1997ರಿಂದ ಕಾರ್ಯ ನಿರ್ವಹಿಸುತ್ತಿದ್ದ ಒಕ್ಕಲಿಗರ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಬಿಜಿಎಸ್ಗೆ ವಹಿಸಿಕೊಟ್ಟಿದೆ. ಇದು ಮೂಡಿಗೆರೆ ನಿವಾಸಿಗಳಲ್ಲಿ ಖುಷಿ ತಂದಿದೆ. ಈ ಶಾಲೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಮೇಲಾಗುತ್ತಿದ್ದ ದೌರ್ಜನ್ಯ ಹಾಗೂ ಆಡಳಿತ ಮಂಡಳಿಯ ವರ್ತನೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲಾಗುತ್ತಿದ್ದ ಪರಿಣಾಮವನ್ನ ಗಮನಿಸಿದ ಫಸ್ಟ್ ಸುದ್ದಿ ಸುದ್ದಿಯ ಮೂಲಕ ಸಮಾಜದ ಕಣ್ಣನ್ನ ತೆರೆಸಿತ್ತು. ಇದೀಗ ಪರಮಪೂಜ್ಯ ನಿರ್ಮಾಲನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಶಾಲೆಯನ್ನ ಬಿಜಿಎಸ್ಗೆ ವಹಿಸಿರೋದ್ರಿಂದ ಮುಂದಿನ ದಿನಗಳಲ್ಲಿ ಮೂಡಿಗೆರೆಯ ಸುತ್ತಮುತ್ತಲಿನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮುಂದಿನ ದಿನಗಳಲ್ಲಿ ಮೂಡಿಗೆರೆಯಲ್ಲೂ ಪದವಿ ಕಾಲೇಜು ಆರಂಭವಾಗಲಿವೆ. ಚಿಕ್ಕಮಗಳೂರಿನ ಎಐಟಿ ಕಾಲೇಜಿನಂತೆ ಇದು ಮೂಡಿಗೆರೆ ಎಐಟಿ ಶಾಲೆ ಆಗಲಿದೆ. ಈಗಾಗಲೇ ಜಾವಳಿ ಶಾಲೆ ಆದಿಚುಂಚನಗಿರಿಯ ಬಿಜಿಎಸ್ ವ್ಯಾಪ್ತಿಗೆ ಒಳಪಟ್ಟಿದೆ. ಮೂಡಿಗೆರೆ ಒಕ್ಕಲಿಗರ ಶಾಲೆಯನ್ನ ಬಿಜಿಎಸ್ ಗೆ ವಿಲೀನ ಮಾಡಿರೋದು ಮೂಡಿಗೆರೆ ಶಿಕ್ಷಣಕ್ಕೆ ಒಂದು ಮೈಲಿಗಲ್ಲು ಅಂದ್ರೆ ತಪ್ಪಿಲ್ಲ. ಒಕ್ಕಲಿಗರ ಶಾಲೆಯನ್ನ ಬಿಜಿಎಸ್ ಗೆ ವಹಿಸೋದಕ್ಕೆ ಪೂರಕ ಮನಸ್ಸಿನಿಂದ ಒಪ್ಪಿಗೆ ನೀಡಿದ ಡಿ.ಎಮ್. ಪುಟ್ಟೇಗೌಡರು , ಸುಂದರೇಶ್ವರರು, ಡಾ! ಪದ್ಮನಾಭ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯವರಿಗೆ ಮೂಡಿಗೆರೆ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ. ಮೂಡಿಗೆರೆಯ ಜನ ಉತ್ತಮ ಶಿಕ್ಷಣಕ್ಕಾಗಿ ಮಂಗಳೂರನ್ನೆ ನಂಬಿಕೊಂಡಿದ್ದರು. ಆದರೀಗ, ಮೂಡಿಗೆರೆಯಲ್ಲೇ ಬಿಜಿಎಸ್ ಶಾಲೆ ಆರಂಭವಾಗಿರೋದು ಮಲೆನಾಡಿಗರ ಕನಸು ನನಸಾಗಿದೆ. ಒಕ್ಕಲಿಗರ ಶಾಲೆ ಬಿಜಿಎಸ್ ಶಾಲೆಯಾಗಲು ಶ್ರಮಿಸಿದ ಫಸ್ಟ್ ಸುದ್ದಿ ಬಳಗಕ್ಕೂ ಮೂಡಿಗೆರೆ ಜನ ಅಭಿನಂದನೆ ಸಲ್ಲಿಸಿದ್ದಾರೆ.