ಕಾಳು ಮೆಣಸು ಕಳ್ಳರನ್ನು ಮಾಲು ಸಹಿತ ಹಿಡಿದ ಮೂಡಿಗೆರೆ ಪೊಲೀಸರು.

1001
firstsuddi

ಮೂಡಿಗೆರೆ: ಕಾಳು ಮೆಣಸು ಕಳವು ಮಾಡಿದ್ದ ಮೂವರು ಕಳ್ಳರನ್ನು ಮೂಡಿಗೆರೆ ಪೊಲೀಸರು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜುಲೈ 11ರ ರಾತ್ರಿ ಸಮಯದಲ್ಲಿ ತಾಲೂಕಿನ ದಾರದಹಳ್ಳಿಯ ಮಲ್ಲಿಕಾರ್ಜುನ ಎಸ್ಟೇಟ್ ನ ಗೋಡಾನ್ ನಲ್ಲಿ ಶೇಖರಣೆ ಮಾಡಿದ್ದ ಕಾಳು ಮೆಣಸು ಕಳ್ಳತನವಾಗಿದ್ದು. ಜುಲೈ 12 ರಂದು ತೋಟದ ಮಾಲೀಕ ಸಚಿತನಂದ ಅವರು ಮೂಡಿಗೆರೆ ಠಾಣೆಗೆ ದೂರು ನೀಡಿದ್ದರು.

ಡಿ.ವೈ.ಎಸ್.ಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಎಂ.ಜಗದೀಶ್ ನೇತೃತ್ವದಲ್ಲಿ ಎ ಎಸ್ ಐ ವೆಂಕಟೇಶ್, ಸೋಮೇಗೌಡ್ರು, ಮಂಜುನಾಥಸ್ವಾಮಿ, ಗಿರೀಶ್, ಕಲ್ಲೇಶ್‍ನಾಯ್ಕ, ವಿಜಿಕುಮಾರ್, ಅಣ್ಣಪ್ಪ ಅವರ ತಂಡ ಕಳ್ಳರ ಜಾಡನ್ನು ಹಿಡಿದು ಹುಬ್ಬಳ್ಳಿಗೆ ತೆರಳಿ ಮೆಣಸು ಮಾರಲು ಯತ್ನಿಸುತ್ತಿದ್ದ ಅಮೀರ್ ಎ.ಜೆ.ಪಾಶ, ಅನ್ವರ್ ಖಾನ್ ಮತ್ತು ಪ್ರದೀಪ ಅವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಕಾಳು ಮೆಣಸುಗಳನ್ನು ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದು. 4 ಕ್ವಿಂಟಾಲ್ ಕಾಳು ಮೆಣಸನ್ನು ವಶಕ್ಕೆ ತೆಗೆದುಕೊಂಡು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.