ಮುಂಬೈ- ಇಂದು ಬೆಳಗಿನಜಾವ ಮುಂಬೈನ ಕೋಟೆ ಪ್ರದೇಶದ ಪಟೇಲ್ ಚೇಂಬರ್ಸ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು,. ಬೆಂಕಿ ಎರಡನೇ ಮಹಡಿಯಲ್ಲಿ ಹೊತ್ತಿಕೊಂಡಿತ್ತು. ನಂತರದಲ್ಲಿ ಮೂರು ನಾಲ್ಕನೇ ಮಹಡಿಗೂ ಹೊತ್ತಿಕೊಂಡಿದೆ. 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ತೊಡಗಿದ್ದವು. ಬೆಂಕಿಯನ್ನು ನಂದಿಸುವ ವೇಳೆ ಇಬ್ಬರು ಅಗ್ನಿಶಾಮಕ ದಳದ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಕೋಟೆ ಪ್ರದೇಶದಲ್ಲಿ ಸಂಭವಿಸುತ್ತಿರುವ ಎರಡನೇ ಭೀಕರ ಅಗ್ನಿದುರಂತ ಇದಾಗಿದೆ. ಮುಂಬೈನ ಸಿಂಧ್ಯಾ ಹೌಸ್ನಲ್ಲಿ ಕಳೆದ ಶುಕ್ರವಾರ ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಸಂಭವಿಸಿತ್ತು. ಯಾವುದೇ ಜೀವಹಾನಿಯಾಗಿಲ್ಲ.