ಚಿಕ್ಕಮಗಳೂರಿನ ಹೊಸ ಜಿಲ್ಲಾಧಿಕಾರಿಗೆ ಚಾರ್ಮಾಟಿಘಾಟ್ ಸವಾಲು…!

1492

ಮೂಡಿಗೆರೆ : ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದಾಗಿ ಮೂಡಿಗೆರೆ-ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸೋ ಚಾರ್ಮಾಡಿ ಘಾಟ್ ಕುಸಿದು ಬಿದ್ದಿದೆ. ಕೊಟ್ಟಿಗೆಹಾರ ದಾಟಿದ ಮೇಲೆ ಸುಮಾರು ನಾಲ್ಕೈದು ಕಿ.ಮೀ. ದಾಟಿದ ಮೇಲೆ ರಸ್ತೆ ಪಕ್ಕದ ಗುಡ್ಡ ಕುಸಿದಿರೋದ್ರಿಂದ ವಾಹನ ಸವಾರರು ಪೇಚಿಗೆ ಸಿಲುಕಿದ್ದಾರೆ. ಕುಸಿದಿರೋ ಗುಡ್ಡವನ್ನ ಕ್ಲೀಯರ್ ಮಾಡಿಲ್ಲ. ವಾಹನ ಸವಾರರು ಹಾಗೂ ಡ್ರೈವರ್‍ಗಳು ಜೀವವನ್ನ ಕೈನಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಚಾರ್ಮಾಡಿಯಲ್ಲಿ ವರ್ಷಪೂರ್ತಿ ಮಳೆ ಸುರಿಯೋದ್ರಿಂದ ಗುಡ್ಡ ಕುಸಿದು ಬಿದ್ದಿರೋದು ಜನಸಾಮಾನ್ಯರು, ಪ್ರವಾಸಿಗರ ಆತಂಕಕ್ಕೂ ಕಾರಣವಾಗಿದೆ.

ಶಿರಾಡಿಘಾಟ್ ದುರಸ್ಥಿಯಲ್ಲಿರೋದ್ರಿಂದ ಮಂಗಳೂರು, ಉಡುಪಿ, ಮಣಿಪಾಲ್, ಧರ್ಮಸ್ಥಳಕ್ಕೆ ಹೋಗೋರು ಇದೇ ಮಾರ್ಗವನ್ನ ಆಶ್ರಯಿಸಿದ್ದಾರೆ. ಆದರೆ, ಯತ್ತೇಚ್ಛವಾಗಿ ವಾಹನಗಳು ಓಡಾಡ್ತಿರೋದ್ರಿಂದ ಮತ್ತಿನ್ನೇನು ಅನಾಹುತ ಸಂಭವಿಸುತ್ತೋ ಎಂದು ಜನ ಹಾಗೂ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗ ಕಿರಿದಾದ ರಸ್ತೆ ಇದ್ದ ಕಾರಣ ಎರಡು ವರ್ಷಗಳ ಹಿಂದ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ರಸ್ತೆಯನ್ನ ಅಗಲಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಕೆಲ ಅಪಾಯ ತಿರುವುಗಳಲ್ಲಿ ಬೋರ್ಡ್‍ಗಳನ್ನ ಹಾಕಿಸಿದ್ದರು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರವೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮಳೆಯಿಂದ ಭೂಕುಸಿತ ಉಂಟಾಗೋದು ಇದೇ ಮೊದಲೇನಲ್ಲ. ಆಗಿಂದಾಗ್ಗೆ ಕುಸಿಯುತ್ತಿರುತ್ತೆ. ಕೂಡಲೇ ಸಂಸದೆ ಶೋಭಾ ಕರಂದ್ಲಾಜೆ ಹೆದ್ದಾರಿ ಪ್ರಾಧಿಕಾರಿದ ಜೊತೆ ಚರ್ಚೆ ನಡೆಸಿ ಈ ಮಾರ್ಗಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ಎಷ್ಟೆ ಮುಂಜಾಗ್ರತ ಕ್ರಮಕೈಗೊಂಡರು ಚಾರ್ಮಾಡಿಯಲ್ಲಿ ಇಂತಹಾ ಅನಾಹುತಗಳು ಸಂಭವಿಸುತ್ತಿರುತ್ತವೆ. ಚಾರ್ಮಾಡಿಯುದ್ಧಕ್ಕೂ ಹೆಚ್ಚಾಗಿ ನೀರು ಹರಿಯೋ ಜಾಗವಿದ್ದು, ಮಣ್ಣು ಹಾಗೂ ಗುಡ್ಡ ಹಸಿಯಾಗಿರೋದರಲ್ಲಿ ಅನುಮಾನವಿಲ್ಲ. ಕೂಡಲೇ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಪುನಃ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನಾಹುತ ನಡೆದರು ಆಶ್ಚರ್ಯವಿಲ್ಲ. ಕೆಲ ಅಪಾಯದ ಜಾಗಗಲ್ಲಿ ಬೋರ್ಡ್ ಹಾಕಿಸುವ ಅಗತ್ಯವಿದೆ. ಈ ಸ್ಥಳದ ಪರಿಚಯವಿಲ್ಲದ ಪ್ರವಾಸಿಗರು ಹರಿಯೋ ನೀರಿನ ಬಳಿ ಸೆಲ್ಫಿ ತೆಗೆಯಲು ಹೋಗಿ ಬಿದ್ದು ಕೈಕಾಲು ಮುರಿದುಕೊಳ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಇಂತಹಾ ಜಾಗಗಳಲ್ಲಿ ಸೂಕ್ತ ನಾಮಫಲಕ ಹಾಕಿಸುವ ಅಗತ್ಯವಿದೆ.

ಇನ್ನೂ ಕತ್ತಲಾಗುತ್ತಿದ್ದಂತೆ ರಾತ್ರಿ ವೇಳೆ ಮಂಗಳೂರಿನಿಂದ ಸಾಕಷ್ಟು ಮರಳು ಲಾರಿಗಳು ಮೂಡಿಗೆರೆ, ಚಿಕ್ಕಮಗಳೂರು ತಲುಪುತ್ತಿವೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಚಾರ್ಮಾಡಿ ಘಾಟ್ ಆರಂಭದಲ್ಲಿರೋ ಚೆಕ್ ಪೋಸ್ಟ್ ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆಂದು ಸ್ಥಳಿಯರಿಗೆ ತಿಳಿಯದಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಗ್ಗೆ ಸೂಕ್ತ ನಿಗಾವಹಿಸಬೇಕಾಗದೆ. ಚೆಕ್ ಪೋಸ್ಟ್ ಯಾವಾಗಲು ಬಾಗಿಲು ಹಾಕಿರುತ್ತೆ. ಅಲ್ಲಿ ಯಾರೂ ಹೇಳೋರು ಕೇಳೋರು ಇಲ್ಲ. ಬಣಕಲ್ ಠಾಣೆ ಎದುರೂ ಚೆಕ್ ಪೋಸ್ಟ್ ಇದ್ರು ಯಾವುದೇ ಪ್ರಯೋಜನವಿಲ್ಲ. ಕೂಡಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ರೆ ಮರಳು ಲಾರಿಗಳು ಎಗ್ಗಿಲ್ಲದೆ ಈ ಘಾಟಿಯಲ್ಲಿ ಸಾಗಿ, ಮುಂದೊಂದು ದಿನ ಮತ್ತೊಂದು ದೊಡ್ಡ ಅನಾಹುತ ನಡೆಯೋದು ಗ್ಯಾರಂಟಿ ಅನ್ಸತ್ತೆ.

 

LEAVE A REPLY

Please enter your comment!
Please enter your name here