ಮುಂದಿನ ಚುನಾವಣೆ ಕಮ್ಯುನಾಲಿಸಂ ಹಾಗೂ ಸೆಕ್ಯುಲಾರಿಸಂ ನಡುವೆ : ಸಿಎಂ ಸಿದ್ದರಾಮಯ್ಯ

635

ಚಿಕ್ಕಮಗಳೂರು : ಈ ವರ್ಷ ನಡೆಯೋ ವಿಧಾನಸಭಾ ಚುನಾವಣೆ ನನ್ನ ಹಾಗೂ ಅಮಿತ್ ಶಾ, ಮೋದಿ, ಯಡಿಯೂರಪ್ಪ ಯಾರನಡುವೆಯೂ ನಡೆಯುತ್ತಿಲ್ಲ. ಇಟ್ ಇಸ್ ಬಿಟ್ವೀನ್ ಟು ಐಡಿಯಾಲಜಿಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮದ್ದು ಸೆಕ್ಯೂಲರಿಸಂ ಪಾರ್ಟಿ. ಬಿಜೆಪಿ ಕಮ್ಯುನಾಲಿಸಂ ಪಾರ್ಟಿ. ಫೈಟ್ ಇರೋದು ಕಮ್ಯುನಾಲಿಸಂ ಅಂಡ್ ಸೆಕ್ಯುಲಾರಿಸಂ ನಡುವೆಯೇ ಹೊರತು ಮೋದಿ, ಅಮಿತ್ ಶಾ, ಯಡಿಯೂರಪ್ಪ ಯಾರ ನಡುವೆಯೂ ಅಲ್ಲ ಎಂದರು. ಆರ್‍ಎಸ್‍ಎಸ್ ಹಾಗೂ ಹಿಂದೂ ಪರ ಸಂಘಟನೆ ನಿಷೇಧಕ್ಕೆ ಸಂಬಂಧಪಟ್ಟಂತೆ, ನಾನು ಆರ್‍ಎಸ್‍ಎಸ್ ಬ್ಯಾನ್ ಮಾಡ್ತೀನಿ ಅಂತ ಎಲ್ಲೂ ಹೇಳಿಲ್ಲ. ಅಷ್ಟೆ ಅಲ್ಲ ಯಾವ ಸಂಘಟನೆಗಳನ್ನೂ ಬ್ಯಾನ್ ಮಾಡ್ತೀನೆಂದು ಹೇಳಿಲ್ಲ. ಕೋಮು ಭಾವನೆ ಕೆರಳಿಸುವಂತಹಾ ಕೆಲಸ ಮಾಡಿದ್ರೆ, ಸರ್ಕಾರ ಅವರ ಮೇಲೆ ಕಾನೂನಾತ್ಮಕ ಏನೆಲ್ಲಾ ಕ್ರಮ ಕೈಗೊಳ್ಳಲು ಸಾಧ್ಯವೋ ಅದೇ ರೀತಿ ಕ್ರಮ ಕೈಗೊಳ್ಳುತ್ತೇನೆಂದು ಅಷ್ಟೆ ಹೇಳಿರೋದು ಎಂದರು. ಇದೇ ವೇಳೆ, ನಾನು ಯಾರ ಮೇಲೂ ವೈಯಕ್ತಿಕ ಟೀಕೆ ಮಾಡಲ್ಲ. ಆ ಕೆಲಸವನ್ನ ವಿರೋಧ ಪಕ್ಷದವರು ಮಾಡ್ತಾರೆ. ಯಾವುದೇ ಆಧಾರವಿದಲ್ಲದೆ ನನ್ನ ಹಾಗೂ ನನ್ನ ಸರ್ಕಾರದ ಮೇಲೆ ಆರೋಪ ಮಾಡ್ತಾರೆ. ಬಿಜೆಪಿ ಹಾಗೂ ಯಡಿಯೂರಪ್ಪರಿಗೆ ಯಾವುದೇ ನನ್ನ ಮೇಲೆ ಆರೋಪ ಮಾಡೋದಕ್ಕೆ ಯಾವದೇ ನೈತಿಕತೆ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.