ಬೆಂಗಳೂರು : ಗೌರಿ ಲಂಕೇಶ್ ಹತ್ಯೆ ಬಳಿಕ ಸರ್ಕಾರ 16 ಚಿಂತಕರಿಗೆ ಭದ್ರತೆ ನೀಡೋದಾಗಿ ಆದೇಶಿಸಿತ್ತು. ಇದೀಗ, ಸರ್ಕಾರದ ಆದೇಶ ಬರಿ ಕಡತಕ್ಕಷ್ಟೆ ಸೀಮಿತವಾಗಿರೋದು ಜಗ್ಗಜ್ಜಾಹಿರಾಗಿದೆ. ಚಿಂತಕರು, ಹೋರಾಟಗಾರರಿಗೆ ಭದ್ರತೆ ನೀಡುವುದಾಗಿ ತಿಂಗಳ ಹಿಂದೆ ಸರ್ಕಾರ ಘೋಷಿಸಿತ್ತು. ಆದರೆ, ಇಂದಿಗಗೂ ಯಾರಿಗೂ ಇನ್ನು ಭದ್ರತೆ ನೀಡಿಲ್ಲ. ಗುಪ್ತಚರ ದಳ ಮಾಹಿತಿಯನ್ವಯ ಕೆಲವರಿಗೆ ಗನ್ಮ್ಯಾನ್ ಹಾಗೂ ಸ್ಥಳೀಯ ಪೊಲೀಸ್ ಭದ್ರತೆ ನೀಡೋದಾಗಿ ಹೇಳಿತ್ತು. ಆದರೆ ಆದೇಶ ಕೇವಲ ಆದೇಶವಾಗೇ ಉಳಿದಿದೆ.
ನಿಡುಮಾಮಿಡಿ ಸ್ವಾಮೀಜಿ, ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಗಿರೀಶ್ ಕಾರ್ನಾಡ್, ಸಿ.ಎಸ್.ದ್ವಾರಕನಾಥ್, ಎಚ್.ಎಸ್.ದೊರೆಸ್ವಾಮಿ, ಟಿ.ಎನ್.ಸೀತಾರಾಂ ಸೇರಿದಂತೆ 16 ಜನರಿಗೆ ಸರ್ಕಾರ ಭದ್ರತೆ ನೀಡಲು ನಿರ್ಧರಿಸಿತ್ತು. ಗೌರಿ ಹತ್ಯೆ ಬಳಿಕ ಮುಂದಿನ ಟಾರ್ಗೆಟ್ ನಾನೇ ಎಂಬಂತಿತ್ತು. ಸಂಬಂಧಿಗಳು ಎಚ್ಚರಿಸುತ್ತಿದ್ದಾರೆ. ಆದರೆ ಯಾವೊಬ್ಬ ಪೊಲೀಸ್ ಪೇದೆಯೂ ನನ್ನನ್ನು ಇಲ್ಲಿವರೆಗೂ ಸಂಪರ್ಕಿಸಿಲ್ಲ. ನನಗೆ ವಿನಾಕಾರಣ ಹುತಾತ್ಮನಾಗುವ ಆಸೆ ಇಲ್ಲ ಎಂದು ಹಿಂದುಳಿದ ವರ್ಗಗಳ ಪರ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಅಸಮಾಧಾನ ತೋಡಿಕೊಂಡಿದ್ದು,