ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಭೇಟಿ ಮಾಡಿ ಸಿಎಂ ಮೇಲಿನ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಕೆಕೆ ಗೇಸ್ಟೌಸ್’ನಲ್ಲಿ ವೇಣಗೋಪಾರನ್ನು ಭೇಟಿಯಾದ ಪರಮೇಶ್ವರ್ ಮತ್ತು ಡಿಕೆಶಿ, ಸಿಎಂಗೆ ಬುದ್ಧವಾದ ಹೇಳುವಂತೆ ಮನವಿ ಮಾಡಿದ್ದಾರೆ.
ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡೋ ಸಂಪ್ರದಾಯ ಕಾಂಗ್ರೆಸ್’ನಲ್ಲಿ ಇಲ್ಲ. ಆದರೆ ಸಿಎಂ ಹೋದಲ್ಲಿ, ಬಂದಲ್ಲಿ ಮುಂದಿನ ಸಿಎಂ ನಾನೇ ಅಂತಾ ಹೇಳೋ ಮೂಲಕ ಪಕ್ಷ ಕಾಪಾಡಿಕೊಂಡು ಬಂದಿರುವ ಸಂಪ್ರದಾಯವನ್ನ ಮುರಿಯುತ್ತಿದ್ದಾರೆ. ಪಕ್ಷ ಇಬ್ಭಾಗವಾಗುವುದನ್ನು ತಪ್ಪಿಸಲು ಕೂಡಲೇ ಇದನ್ನ ತಡೆಯಿರಿ ಅಂತಾ ವೇಣುಗೋಪಾಲ್’ರ ಬಳಿ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೇಣುಗೋಪಾಲ್ ನೀವು ಕೂಲಾಗಿರಿ, ಸಿದ್ದರಾಮಯ್ಯಗೆ ನಾನೆಲ್ಲ ಹೇಳ್ತೇನೆ ಎಂದು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.