ಪಾಕ್ ಪರಮಾಣು: ಏಷ್ಯಾ ವಲಯಕ್ಕೆ ಗಂಡಾಂತರ

476

ವಾಷಿಂಗ್ಟನ್: ಪಾಕಿಸ್ತಾನದ ಕುಟಿಲ ಯುಕ್ತಿಯ ಅಣ್ವಸ್ತ್ರ ಕಾರ್ಯಕ್ರಮ ಏಷ್ಯಾ ವಲಯದ ಸುರಕ್ಷತೆ ಹಾಗೂ ಭದ್ರತೆಗೆ ಗಂಡಾಂತರ ತಂದೊಡ್ಡಿರುವುದಷ್ಟೇ ಅಲ್ಲ, ಸಾಂಪ್ರದಾಯಕ ಸಮರವನ್ನು ಅಣ್ವಸ್ತ್ರ ಸಮರದ ಮಟ್ಟಕ್ಕೆ ಕೊಂಡೊಯ್ಯುವ ನಿಚ್ಚಳ ರಹದಾರಿ ಎನಿಸಿಕೊಂಡಿದೆ ಎಂದು ಅಮೆರಿಕದ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.
ಏನೇ ಆದರೂ, ಇಲ್ಲಿಯವರೆಗೆ ತನ್ನ ಕುಟಿಲ ಪರಮಾಣು ಸಮರದ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವ ದುಸ್ಸಾಹಸಕ್ಕೆ ಪಾಕಿಸ್ತಾನ ಕೈಹಾಕಿದಂತೆ ಗೋಚರವಾಗುತ್ತಿಲ್ಲ ಎಂದು ಅಟ್ಲಾಂಟಿಕ್ ಕೌನ್ಸಿಲ್ ಈ ತಿಂಗಳು ಪ್ರಕಟಗೊಂಡ ‘ದ್ವಿತೀಯ ಅಣು ಯುಗದಲ್ಲಿ ಏಷ್ಯಾ’ ಎಂಬ ವರದಿಯಲ್ಲಿ ಉಲ್ಲೇಖಿಸಿದೆ.
ಏಷ್ಯಾ ವಲಯದಲ್ಲಿ ಬೃಹತ್ತಾದ, ಅತ್ಯಾಧುನಿಕ ಹಾಗೂ ವೈವಿಧ್ಯಮಯ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಿಂದ ಗಂಡಾಂತರ ಎದುರಾಗುತ್ತಿರುವುದಲ್ಲ, ಅದರ ಬದಲು ಅವುಗಳನ್ನು ಕಾವಲು ಕಾಯುತ್ತಿರುವ ಸಂಸ್ಥೆಗಳ ನಿರಂತರ ಸ್ಥಿರತೆಯಿಂದ ಗಂಡಾಂತರ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಪಾಕಿಸ್ತಾನದ ಸ್ಥಿರತೆ ವೈಲ್ಡ್ ಕಾರ್ಡ್ ಆಗಿಯೇ ಉಳಿದುಕೊಳ್ಳಲಿದೆ,” ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಂತೆಯೇ ಉಭಯ ದೇಶಗಳ ವಿತರಣಾ ವ್ಯವಸ್ಥೆ ಕೂಡ ಸ್ವಾಧೀನ ಚಕ್ರದಲ್ಲಿ ಮೊದಲನೆಯದು ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳಿಗೆ ಹೋಲಿಸಿದರೆ ಚೀನಾದ ಪರಮಾಣು ಸಾಮರ್ಥ್ಯ ಮೇಲ್ಮಟ್ಟದ್ದಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here