ಶಿವಮೊಗ್ಗ – ನನಗೆ ಮೋಸ ಮಾಡಿದ ಯಡಿಯೂರಪ್ಪ ಅವರಿಗೂ ರಾಜ್ಯದ ಜನ ಮೋಸ ಮಾಡಿದ್ದು, ನನ್ನ ಹರಕೆ ಈಗ ಈಡೇರಿದೆ. ಎಂದು ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಸೋತಿರುವುದು ಬಹಳ ನೋವಾಗಿದೆ. 150 ಸ್ಥಾನ ಗುರಿ ಇಟ್ಟುಕೊಂಡು ಅಬ್ಬರದ ಪ್ರಚಾರ ನಡೆಸಿದ ಯಡಿಯೂರಪ್ಪ ಅವರ ಆಟ ಮುಗಿದು ಹೋಯಿತು. ಕರ್ನಾಟಕದ ಜನ ಹೆಡ್ಡರಲ್ಲ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಜನ ಒಪ್ಪುವುದಿಲ್ಲ.
ಕಾಂಗ್ರೆಸ್- ಜೆ.ಡಿ.ಎಸ್ ಸರ್ಕಾರವನ್ನು ಅಪವಿತ್ರ ಮೈತ್ರಿ ಎನ್ನುವ ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇಲ್ಲ. ಈ ಹಿಂದೆ ಇವರೆ ಜೆ.ಡಿ.ಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಡಿ.ಸಿ.ಎಂ ಆಗಿದ್ದು ಮರೆತಿದ್ದಾರೆ. ಆಗ ಇಲ್ಲದ ಅಪವಿತ್ರ ಈಗ ಎಲ್ಲಿಂದ ಬಂತು.
ಇನ್ನೂ ಭ್ರಷ್ಟಾಚಾರಿಗಳು ಯಾರು ಎಂದು ತಿಳಿಯಬೇಕಾದರೆ ಶೋಭಾ ಕರಂದ್ಲಾಜೆ ಮನೆ ಮೇಲೆ ಐ.ಟಿ ದಾಳಿ ಮಾಡಿದರೆ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹಣ ಹಾಗೂ ಶೋಭಾ ಕರಂದ್ಲಾಜೆ ಅವರ ಅಕ್ರಮ ಸಂಪಾದನೆ ಬಹಿರಂಗವಾಗುತ್ತದೆ ಎಂದು ತಿಳಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಹಾಗೂ ಮೋದಿ ಆಟ ನಡೆಯುವುದಿಲ್ಲ. ನನಗೆ ಸಿಗದ ಅಧಿಕಾರ ಯಡಿಯೂರಪ್ಪ ಅವರಿಗೂ ಸಿಗಬಾರದು ಎಂದು ನನ್ನ ಮನೆದೇವರಾದ ಹುಚ್ಚರಾಯಸ್ವಾಮಿಗೆ ಹರಕೆ ಹೊತ್ತಿದ್ದೆ . ಅದರಂತೆ ಹರಕೆ ಈಗ ಈಡೇರಿದೆ. ಸಿ.ಎಂ ಕುಮಾರಸ್ವಾಮಿ ಈ ಭಾರಿ ಉತ್ತಮ ಆಡಳಿತ ನೀಡುವುದು ಖಚಿತ. ನಾನು ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.