ಚಿಕ್ಕಮಗಳೂರು : ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ನಿರ್ಮಲಾನಂದ ಸ್ವಾಮೀಜಿ ಪಾದ ಮುಟ್ಟಿ ಆಶೀರ್ವಾದ ಪಡೆದಿರೋದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದೊಂದು ವಾರದ ಹಿಂದೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೂಡಿಗೆರೆಗೆ ಬಂದಿದ್ದ ನಿರ್ಮಲಾನಂದ ಸ್ವಾಮೀಜಿಯ ಕಾಲಿಗೆ ಬಿದ್ದು ಕುಮಾರಸ್ವಾಮಿ ಆಶೀರ್ವಾದ ಪಡೆದಿದ್ರು. ಈ ಫೋಟೋ ಮೂಡಿಗೆರೆ ಬಿಜೆಪಿ ಮಂಡಲದ ಗ್ರೂಪ್‍ಗೆ ಕಾರ್ಯಕರ್ತರೊಬ್ಬರು ಹಾಕಿದ್ರು. ಈ ಫೋಟೋ ನೋಡಿದ ಗ್ರೂಪಿನ ಕೆಲ ಅಯೋಗ್ಯರ ಸ್ಪರ್ಶದಿಂದ ನಿರ್ಮಲಾನಂದ ಸ್ವಾಮೀಜಿ ಅಪವಿತ್ರವಾಗಿದ್ದಾರೆಂದು ಚರ್ಚಿಸಿದ್ರು. ಆದರೆ, ಕೂಡಲೇ ಗ್ರೂಪ್‍ನಲ್ಲಿದ್ದ ಕೆಲ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದಲಿತರೆಲ್ಲಾ ಅಯೋಗ್ಯರೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಂತಹಾ ಪಕ್ಷದಲ್ಲಿ ಈ ರೀತಿಯ ಚರ್ಚೆ-ವಾದ-ವಿವಾದ ನಡೆದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ವಾಟ್ಸಾಪ್ ಗ್ರೂಪಿನಲ್ಲಿ ಚರ್ಚಿಸಿದ ಸದಸ್ಯರು, ನಾವು ಬೇರೆ ಅರ್ಥದಲ್ಲಿ ಹೇಳಿದ್ದು. ಆದರೆ, ಅದನ್ನೇ ಇಲ್ಲಿ ತಿರುಚಲಾಗಿದೆ ಎಂದು ಗ್ರೂಪಿನ ಕೆಲ ಸದಸ್ಯರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 6ನೇ ತಾರೀಖು ನಿರ್ಮಲಾನಂದ ಸ್ವಾಮೀಜಿಯವರು ಮೂಡಿಗೆರೆಯ ಒಕ್ಕಲಿಗರ ಶಾಲೆಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ, ಮಾಜಿ ಎಂಎಲ್‍ಎ ಕುಮಾರಸ್ವಾಮಿ ಸ್ವಾಮೀಜಿಯ ಆಶೀರ್ವಾದ ಪಡೆದಿದ್ರು. ಅವರು ಆಶೀರ್ವಾದ ಪಡೆಯುವ ಫೋಟೋವನ್ನ ಕಾರ್ಯಕರ್ತರು ಮೂಡಿಗೆರೆ ಬಿಜೆಪಿ ಮಂಡಲದ ವಾಟ್ಸಾಪ್ ಗ್ರೂಪ್‍ಗೆ ಹಾಕಿದ್ರು. ಆ ಫೋಟೋಕೆ ಬಿಜೆಪಿ ಕಾರ್ಯಕರ್ತರೇ ಅಯೋಗ್ಯರ ಸ್ಪರ್ಶದಿಂದ ಸ್ವಾಮೀಜಿ ಅಪವಿತ್ರಗೊಂಡಿದ್ದಾರೆಂದು ಚರ್ಚೆ-ವಾದ-ವಿವಾದ ನಡೆಸಿದ್ದಾರೆ. ಈ ರೀತಿಯ ಚರ್ಚೆ ಈಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಲಿತರೆಲ್ಲಾ ಅಯೋಗ್ಯರು, ಅಪವಿತ್ರರು ಎಂಬಂತಾಗಿದೆ. ಆದರೆ, ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸದಸ್ಯರೊಬ್ಬರು, ಕುಮಾರಸ್ವಾಮಿಯವರು ಕೆಲ ವಿಚಾರಗಳಲ್ಲಿ ಹೇಗಿದ್ದಾರೆ ಅನ್ನೋದು ನಾಡಿಗೆ ಗೊತ್ತಿದೆ. ಅದೆಲ್ಲಾ ಮಾಧ್ಯಮಗಳಲ್ಲೂ ಸುದ್ದಿಯಾಗಿದೆ. ಈ ಹಿನ್ನೆಲೆ ಅಪವಿತ್ರ ಎಂಬ ಪದ ಬಳಸಿದ್ವೋ ವಿನಃ ಜಾತಿಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾಕಂದ್ರೆ, ನಿರ್ಮಲಾನಂದ ಸ್ವಾಮೀಜಿಯವರು ಬಂದ ಆ ದಿನ ಅಲ್ಲಿ ಮೋಟಮ್ಮ, ದೀಪಕ್ ದೊಡ್ಡಯ್ಯ, ಬಣಕಲ್ ಶಾಮಣ್ಣ ಎಲ್ಲರೂ ಇದ್ರು. ಅವರೆಲ್ಲರೂ ದಲಿತ ಮುಖಂಡರೆ. ಅವರ್ಯಾರಿಂದಲೂ ಆಗದ ಅಪವಿತ್ರ ಇವರಿಂದಲೇ ಆಯ್ತು ಅಂದ್ರೆ ಅದಕ್ಕೊಂದು ಬಲವಾದ ಕಾರಣ ಇದೆ. ಆ ಕಾರಣ ಮೂಡಿಗೆರೆ ಸೇರಿದಂತೆ ನಾಡಿನ ಜನಕ್ಕೆ ಗೊತ್ತಿದೆ ಎಂದಿದ್ದಾರೆ.
ಈ ಕೆಲಸ ಯಾರು ಮಾಡಿದ್ದಾರೆ ಗೊತ್ತಿದೆ. ಈಗಾಗಲೇ ಪಕ್ಷದ ಹಿರಿಯ ಗಮನಕ್ಕೂ ತರಲಾಗಿದೆ. ಪಕ್ಷ ಅವರ ವಿರುದ್ಧ ಕ್ರಮಕೈಗೊಳ್ಳಲಿದೆ ಅಂತಾರೆ ಕುಮಾರಸ್ವಾಮಿ. ಆದರೆ, ಕುಮಾರಸ್ವಾಮಿ ಮೂಡಿಗೆರೆ ಕ್ಷೇತ್ರದ ಟಿಕೆಟ್ ತಪ್ಪಿಸಲು ಈ ರೀತಿ ಸಂಚು ನಡೆಸಿದ್ದಾರೆ ಎಂದೂ ಹೇಳಲಾಗ್ತಿದೆ. ಯಾಕಂದ್ರೆ, ಮೀಸಲು ಕ್ಷೇತ್ರವಾಗಿರೋ ಮೂಡಿಗೆರೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಎಂಟರ ಗಡಿ ದಾಟಿದೆ. ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸಲು ಸ್ವಪಕ್ಷದವರೇ ಹೀಗೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರ್ತಿದೆ. ಆದರೆ, ಅದೆಲ್ಲಾ ಊಹಾಪೋಹವಷ್ಟೆ. ಈ ರೀತಿಯ ಸಂದೇಶ ಬೇರೆ ಗ್ರೂಪಿನಲ್ಲಿ ಚರ್ಚೆಯಾಗಿದ್ರೆ ಅದಕ್ಕೆ ಬೇರೆ ಅರ್ಥ ಬರ್ತಿತ್ತು. ಆದ್ರೆ, ಬಿಜೆಪಿ ಪಕ್ಷದ ಗ್ರೂಪಲ್ಲಿ ಈ ರೀತಿ ಚರ್ಚೆಗಾಗಿರೋದಕ್ಕೆ ರಾಜಕೀಯ ಬಣ್ಣ ಬಂದಿದೆ. ಅಸಲಿಗೆ ಬೇರೆಯದ್ದೇ ಅರ್ಥದಲ್ಲಿ ಇಲ್ಲಿ ಚರ್ಚೆ ನಡೆಸಲಾಗಿದೆ.