ಅಯ್ಯನಕೆರೆಯ ದಂಡೆಯಲ್ಲಿರುವ ಐತಿಹಾಸಿಕ ಬಳ್ಳಾಳೇಶ್ವರ ಸ್ವಾಮಿಗೆ ಮಳೆಗಾಗಿ ರೈತರಿಂದ ಪ್ರಾರ್ಥಿನೆ…

351
firstsuddi

ಚಿಕ್ಕಮಗಳೂರು -ಮಳೆಗಾಗಿ ಪ್ರಾರ್ಥಿಸಿ ಕಡೂರು ತಾಲ್ಲೂಕಿನ ಅಯ್ಯನಕೆರೆಯ ದಂಡೆಯಲ್ಲಿರುವ ಐತಿಹಾಸಿಕ ಬಳ್ಳಾಳೇಶ್ವರ ಸ್ವಾಮಿಗೆ ಕಳೆದ ಐದು ದಿನಗಳಿಂದ ರೈತರು ನಡೆಸುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳು, ಪರ್ಜನ್ಯಾಭಿಷೇಕ, ರುದ್ರಹೋಮ, ಪರ್ಜನ್ಯ ಹೋಮದ ಪೂರ್ಣಾಹುತಿಯೊಂದಿಗೆ ಸೋಮವಾರ ಸಂಪನ್ನಗೊಂಡವು.ಮಳೆಗಾಗಿ ಪ್ರಾರ್ಥಿಸಿ ಕಳೆದ ಐದು ದಿನಗಳಿಂದ ಶ್ರೀ ಬಳ್ಳಾಳೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ದೇವಾಲಯದಲ್ಲಿ ರುದ್ರಾಭಿಷೇಕ, ಗಣಪತಿ ಹೋಮ, ಪರ್ಜನ್ಯಾಭಿಷೇಕ, ಚಂಡಿಕಾ ಹೋಮ, ಕನ್ನಿಕಾ ಪೂಜೆ, ಸುಮಂಗಲಿ ಪೂಜೆ, ದಂಪತಿ ಪೂಜೆ, ರುದ್ರಾಭಿಷೇಕ, ಲಕ್ಷ್ಮೀನಾರಾಯಣ ಹೋಮ ಜರುಗಿದವು.ಇಂದು ಬೆಳಿಗ್ಗೆ ಬಳ್ಳಾಳೇಶ್ವರ ಸ್ವಾಮಿಗೆ ರುದ್ರ ಹೋಮ, ಪರ್ಜನ್ಯ ಹೋಮ ಮತ್ತು ರುದ್ರಾಭಿಷೇಕ ನೆರವೇರಿಸಲಾಯಿತು, ಪೂರ್ಣಾಹುತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಇದೇ ವೇಳೆ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮತ್ತು ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಎಸ್.ಎಲ್.ಭೋಜೇಗೌಡ ಬಯಲು ಸೀಮೆಯ ರೈತರ ಜೀವನಾಡಿಯಾಗಿರುವ ಅಯ್ಯನಕೆರೆ, ಮದಗದಕೆರೆ ಅಭಿವೃದ್ದಿಗೆ ಮತ್ತು ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲು ಮುಖ್ಯಮಂತ್ರಿಗಳೊಂದಿಗೆ ಸ್ಥಳೀಯ ರೈತರ ಸಭೆಯನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ಹೇಳಿದರು.ಪರ್ಜನ್ಯಾಭಿಷೇಕದ ಅಂತಿಮ ದಿನವಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ರೈತರು ಮತ್ತು ಭಕ್ತರು ಕೆರೆಯ ಅಚ್ಚುಕಟ್ಟುದಾರರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.ಶ್ರೀ ಬಳ್ಳಾಳೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎ.ಕಲ್ಮರುಡಪ್ಪ, ಉಪಾಧ್ಯಕ್ಷರಾದ ಎಸ್.ಬಸವೇಗೌಡ, ಎಸ್.ಬಿ.ರಾಮಲಿಂಗು, ಎಸ್.ಪಿ.ಲೋಕೇಶ್, ಪಿ.ಮಲ್ಲೇಶಪ್ಪ, ಬಿ.ಎಸ್.ಹಾಲಪ್ಪ, ನಾಯಕ್ ಕೃಷ್ಣಸ್ವಾಮಿ, ಆರ್.ಚಂದ್ರಶೇಖರ್, ಕಾರ್ಯದರ್ಶಿಗಳಾದ ಕೆ.ಎಸ್.ರುದ್ರಸ್ವಾಮಿ, ಎಸ್.ಎಸ್.ಪ್ರಸನ್ನ ಹಾಜರಿದ್ದರು.