ಚಿಕ್ಕಮಗಳೂರು : ಜಿಲ್ಲೆ ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿದ್ದ ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತ್ತಿದ್ದು, ಭೇಟಿ ದಿನಾಂಕ ಹಾಗೂ ಸಮಯ ಇನ್ನಷ್ಟೆ ನಿಗದಿಯಾಗಬೇಕಿದೆ. ಹೌದು, ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಚೈತ್ರಶ್ರೀ ಪ್ರಧಾನಿ ಮೋದಿ ಭೇಟಿ ಅವಕಾಶಕ್ಕಾಗಿ ಪತ್ರ ಬರೆದಿದ್ದು ಸದ್ಯ ಪತ್ರಕ್ಕೆ ಸ್ಪಂದನೆ ದೊರೆತ್ತಿರೋದು ಚೈತ್ರಶ್ರೀ ಗೆ ಸಂತಸ ತಂದಿದೆ. ತಳ ಸಮುದಾಯದಿಂದ ಬಂದು, ವಿದ್ಯಾವಂತೆಯಾಗಿ ಸಣ್ಣ ವಯಸ್ಸಿನಲ್ಲೇ ಜಿ.ಪಂ ಅಧ್ಯಕ್ಷೆ ಸ್ಥಾನದಂತಹ ಮಹತ್ವದ ಹುದ್ದೇಗೇರಿದ ಸಾಧನೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ವಾರದ ಹಿಂದಷ್ಟೇ ಕರೆ ಬಂದಿದೆ.
ಪ್ರಧಾನಿ ಮೋದಿ ಅವರ ಖಾಸಗಿ ಆಪ್ತಸಹಾಯಕರು ಕರೆ ಮಾಡಿ ಚೈತ್ರಶ್ರೀ ಬರೆದಿದ್ದ ಪತ್ರದ ಬಗ್ಗೆ ಚರ್ಚಿಸಿದ್ದಾರೆ. ಸದ್ಯಕ್ಕೆ ಪ್ರಧಾನಿಯವರಿಗೆ ಬಿಡುವಿಲ್ಲದ ಕಾರಣ ಶ್ರೀಘ್ರದಲ್ಲೇ ಪ್ರಧಾನಿಯೊಂದಿಗೆ ಮಾತುಕತೆಗೆ ಸಮಯ ನಿಗದಿ ಮಾಡಲಾಗುವುದು ಎಂದು ಮೋದಿ ಆಪ್ತಸಹಾಯಕರು ಕರೆ ಮಾಡಿದ್ದಾಗ ತಿಳಿಸಿದ್ದಾರೆ. ಇನ್ನು ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಜಿ.ಪಂ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ಚೈತ್ರಶ್ರೀ ಕೆಳಗಿಳಿಯಬೇಕಿತ್ತು, ಆದ್ರೆ, ಚೈತ್ರಶ್ರೀ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡದೆ ಮೊಂಡು ಹಠ ಮಾಡಿ ಜಿಲ್ಲಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರೋ ಬೆನ್ನಲ್ಲೇ ಮೋದಿ ಭೇಟಿಗೆ ಅವಕಾಶ ಕರೆ ಬಂದಿರೋದು ಚೈತ್ರಶ್ರೀ ಸಂತಸ ತಂದಿದೆ. ಆದ್ರೆ, ಚೈತ್ರಶ್ರೀಯ ಪ್ರಧಾನಿ ಭೇಟಿ ವಿಷಯ ಜಿಲ್ಲಾ ಬಿಜೆಪಿಯಲ್ಲಿ ಕಳವಳ ತಂದಿದೆ.