ಬಿಗ್ ಬಾಸ್ಗೆ ಪುಟ್ಟಗೌರಿ ಶಾಕ್ ನೀಡಿದ್ದಾಳೆ…ಕಲರ್ಸ್ ಕನ್ನಡದಲ್ಲಿ ಪುಟ್ಟಗೌರಿಯೇ ನಂ.1…!

1158

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಎಲ್ಲರ ನಿರೀಕ್ಷೆ ಮೀರಿ ರೇಟಿಂಗ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಬಹುಶಃ ಬಿಗ್ ಬಾಸ್ ಕಾರ್ಯಕ್ರಮವೇ ನಂಬರ್ ಒನ್ ಇರಬೇಕೆಂದು ಭಾವಿಸಿರುವವರಿಗೆ ಪುಟ್ಟಗೌರಿ ಶಾಕ್ ನೀಡಿದ್ದಾಳೆ.ಈ ವಾರದ (43ನೇ ವಾರ ಅ.21 ರಿಂದ ಅ.27) ಬಾರ್ಕ್ ಇಂಡಿಯಾದ ರೇಟಿಂಗ್ ಹೊರಬಿದ್ದಿದೆ. ಕನ್ನಡದ ಟಾಪ್ ಐದು ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಸುಳಿವಿಲ್ಲ. ಮೊದಲ ಸ್ಥಾನವನ್ನು ಪುಟ್ಟಗೌರಿ ಅಲಂಕರಿಸಿದ್ದಾಳೆ. ಸದ್ಯಕ್ಕೆ ಪುಟ್ಟಗೌರಿ ಎಷ್ಟೇ ಟೀಕೆ, ಟ್ರೋಲ್, ಹಾಸ್ಯಕ್ಕೆ ಒಳಗಾದರೂ ಈ ಧಾರಾವಾಹಿಯನ್ನು ವೀಕ್ಷಿಸುವವರಿಗೇನು ಬರವಿಲ್ಲದಂತಾಗಿದೆ.

ವಿಶೇಷ ಎಂದರೆ ಟಾಪ್ 5 ಕಾರ್ಯಕ್ರಮಗಳಲ್ಲಿ ಕಲರ್ಸ್ ಕನ್ನಡ ಇರುವುದು. ಎರಡನೇ ಸ್ಥಾನದಲ್ಲಿ ಲಕ್ಷ್ಮಿಬಾರಮ್ಮ, ಬಳಿಕ ಶನಿ ಮಹಾಸಂಚಿಕೆ, ಕುಲವಧು, ಅಗ್ನಿಸಾಕ್ಷಿ ಧಾರಾವಾಹಿಗಳಿವೆ. ಇನ್ನು ಟಾಪ್ 5 ಚಾನಲ್‌ಗಳಲ್ಲಿ ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದ್ಲಲ್ಲಿ ಜೀ ಕನ್ನಡ, ಮೂರು ಮತ್ತು ನಾಲ್ಕರಲ್ಲಿ ಉದಯ ಟಿವಿ ಹಾಗೂ ಉದಯ ಮೂವೀಸ್ ಹಾಗೂ ಐದನೇ ಸ್ಥಾನದಲ್ಲಿ ಸ್ಟಾರ್ ಸುವರ್ಣ ಇದೆ. ಇದು 43ನೇ ವಾರದ ರೇಟಿಂಗ್. 44ನೇ ವಾರದಲ್ಲಿ ಮೊದಲ ಸ್ಥಾನದಲ್ಲಿ ಅಗ್ನಿಸಾಕ್ಷಿ ಇದೆ ಎನ್ನುತ್ತವೆ ಮೂಲಗಳು.

LEAVE A REPLY

Please enter your comment!
Please enter your name here