ಕುವೆಂಪು ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನಾಟಕದ ಕಲಾವಿದರಿಂದ ರಾಮ-ಕೃಷ್ಣ-ಗೋವಿಂದ ನಾಟಕ

664

ಚಿಕ್ಕಮಗಳೂರು : ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ನಾಟಕದ ಕಲಾವಿದರಿಂದ ಭಾನುವಾರ ಸಂಜೆ ನಡೆದ ರಾಮ-ಕೃಷ್ಣ-ಗೋವಿಂದ ನಾಟಕ ನೋಡುಗರಿಗೆ ಸಂಪೂರ್ಣ ಮನರಂಜನೆ ಒದಗಿಸುವಲ್ಲಿ ಯಶಸ್ವಿಯಾಯಿತು. ಕಲಾವಿದರ ಕುಂದಾಪುರ ಶೈಲಿಯ ಚುರುಕು ಸಂಭಾಷಣೆ, ಮಿಂಚಿನ ಅಭಿನಯ, ಕಲಾಮಂದಿರದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸುವುದರ ಜೊತೆಗೆ ಪ್ರೇಕ್ಷಕರನ್ನು ಕಡೆಯವರೆಗೂ ಹಿಡಿದಿಡುವಲ್ಲಿ ಸಫಲವಾಯಿತು.

ಕುಂದಾಪುರದ ರಂಗಕರ್ಮಿ ಕುಳ್ಳಪ್ಪು ಸತೀಶ್ ಪೈ ಅವರು ಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜೊತೆಗೆ ರಾಮನ ಪಾತ್ರದಲ್ಲಿ ಸಮರ್ಥವಾಗಿ ಅಭಿನಯಿಸುವ ಮೂಲಕ ನೋಡುಗರ ಮನ ಗೆದ್ದರು. ಕೃಷ್ಣನಾಗಿ ಕುಳ್ಳಪ್ಪು ಸಂತೋಷ್ ಪೈ, ಗೋವಿಂದನ ಪಾತ್ರದಲ್ಲಿ ಅಶೋಕ್ ಶ್ಯಾನ್‍ಭಾಗ್ ಹಾಗೂ ರಾಮನ ಪಾತ್ರಧಾರಿ ಕುಳ್ಳಪ್ಪು ಸತೀಶ್ ಪೈ ಅವರ ನವಿರು ಹಾಸ್ಯ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಸಾಂಸ್ಕøತಿಕ ಸಂಘದ ವತಿಯಿಂದ ಇದೇ ವೇಳೆ ನಾಟಕದ ನಿರ್ದೇಶಕ ಕುಳ್ಳಪ್ಪು ಸತೀಶ್ ಪೈ ಅವರಿಗೆ ನಟಶಿರೋಮಣಿ ಬಿರುದು ನೀಡಿ ಸನ್ಮಾನಿಸಲಾಯಿತು, ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಹೊರತರಲಾದ ಸುವರ್ಣ ಸಾಂಸ್ಕøತಿಕ ಸ್ಮರಣ ಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್ ಬಿಡುಗಡೆಗೊಳಿಸಿದರು. ಸಂಘದ ಗೌರವಾಧ್ಯಕ್ಷ ಎ.ಆರ್.ಶೇಷಾದ್ರಿ, ಅಧ್ಯಕ್ಷ ಎಂ.ಎಸ್.ಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದ್‍ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಖಜಾಂಚಿ ಬಿ.ರಣಜಿತ್ ಸಿಂಗ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ಭಟ್, ಸಾಹಿತಿ ಬೆಳವಾಡಿ ಮಂಜುನಾಥ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here