ಉಡುಪಿ: ಶೀರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಸಾವಿನ ಪ್ರಕರಣದಲ್ಲಿ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ರಮ್ಯಾ ಶೆಟ್ಟಿ ಅವರು ಬುರ್ಕಾ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದು ಆಳದಂಗಡಿ ಕಾರಣಿಕ ಸತ್ಯದೇವರ ಬಳಿ ಸಿಕ್ಕಿಬಿದ್ದಿದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ರಮ್ಯಾ ಶೆಟ್ಟಿ ಮೂವರು ಮಹಿಳೆಯರೊಂದಿಗೆ ಬುರ್ಕಾ ಹಾಕಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆಳದಂಗಡಿ ಸತ್ಯದೇವರ ದೇಗುಲದ ಎದುರು ಕಾರು ಪಂಚರ್ ಆಗಿದ್ದು ಸಂಶಯಗೊಂಡ ಸ್ಥಳೀಯರು ವಿಚಾರಿಸಿದಾಗ ಆಕೆ ರಮ್ಯಾ ಶೆಟ್ಟಿ ಎಂದು ತಿಳಿದುಬಂದಿದ್ದು. ಉಡುಪಿ ಪೊಲೀಸರು ರಮ್ಯಾ ಶೆಟ್ಟಿ ಯನ್ನು ಹಿಂಬಾಲಿಸಲು ವೇಣೂರು ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಕಾರನ್ನು ಹಿಂಬಾಲಿಸಿದ ಪೊಲೀಸರು ರಮ್ಯಾ ಅವರನ್ನು ಕಾರಣಿಕ ಕ್ಷೇತ್ರದ ಬಳಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.